ಹೋಂ ಕ್ವಾರಂಟೈನ್ ಮುಕ್ತಾಯ- ಇಂದಿನಿಂದ ಸಿಎಂ ಫುಲ್ ಆ್ಯಕ್ಟಿವ್

ಬೆಂಗಳೂರು: ಕೊರೊನಾ ವೈರಸ್ ಗೆದ್ದು, ಕ್ವಾರಂಟೈನ್ ಕೂಡ ಮುಗಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದಿನಿಂದ ಫುಲ್ ಆ್ಯಕ್ಟಿವ್ ಆಗಲಿದ್ದಾರೆ.

ಹೌದು. ಸಿಎಂ ಅವರು ಇಂದಿನಿಂದ ಎಂದಿನಂತೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಈ ಮೂಲಕ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಕೊರೊನಾದಿಂದಾಗಿ ಸಿಎಂ ಅವರ ಹಲವು ಪ್ರಮುಖ ಕೆಲಸಗಳು ಬಾಕಿ ಇವೆ. ಇಂದಿನಿಂದ ತಮ್ಮ ಪ್ರಮುಖ ಕೆಲಸಗಳತ್ತ ಗಮನಕೊಡಲಿದ್ದಾರೆ.

ಅದಕ್ಕೂ ಮುನ್ನ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾಳೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಎರಡು ವಾರಗಳ ಹಿಂದೆ ಕೊರೊನಾ ಟೆಸ್ಟ್ ಮಾಡಿದಾಗ ವರದಿ ಪಾಸಿಟಿವ್ ಎಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಎಚ್‍ಎಎಲ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಸಿಎಂ ಈಗ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಮುಖ್ಯಮಂತ್ರಿಗಳು ಎರಡನೇ ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆಗಸ್ಟ್ 10 ರಂದು ಬೆಳಗ್ಗೆ ವರದಿ ನೆಗೆಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದು ಸಂಜೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸಿಎಂ ಹೋ ಕ್ವಾರಂಟೈನ್ ಗೆ ಒಳಗಾಗಿದ್ದರು.

Comments

Leave a Reply

Your email address will not be published. Required fields are marked *