ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!

ಬೆಂಗಳೂರು: ಕೊರೊನಾ ಮೂರನೇ ಅಲೆಯ ಆತಂಕದ ಬೆನ್ನಲ್ಲೇ ಹೆಮ್ಮಾರಿ ವೈರಸ್ ಮತ್ತೊಂದು ಸ್ಬರೂಪ ಪಡೆದಿದೆ. ಕಣ್ಣೀರಿನಿಂದಲೂ ಕೊರೊನಾ ಹರಡುತ್ತೆ ಎಂದು ಪಂಜಾಬ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಕಣ್ಣೀರಿನ ಮೂಲಕವೂ ಮತ್ತೊಬ್ಬರಿಗೆ ಸೋಂಕು ಹರಡಬಹುದೆಂದು ಸಂಶೋಧನೆಯಲ್ಲಿ ತಿಳಿದು ಬಂದಿದ್ದು, ನೇತ್ರ ತಜ್ಞರು ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಸಂಶೋಧನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್ ನ ಅಮೃತಸರದ ಸರ್ಕಾರಿ ವೈದ್ಯ ಕಾಲೇಜು ನಡೆಸಿದ ಅಧ್ಯಯನದಲ್ಲಿ ಈ ವರದಿ ಬೆಳಕಿಗೆ ಬಂದಿದೆ. ದೇಹದ ಯಾವುದಾದರೂ ಭಾಗದಲ್ಲಿ ಕಾಯಿಲೆ ಕಾಣಿಸಿಕೊಂಡರೆ, ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಅಕ್ಯೂಲರ್ ಮ್ಯಾನಿಫೆಸ್ಟೇಷನ್(Ocular Manifestations) ಎಂದು ಕರೆಯಲಾಗುತ್ತದೆ. ಮ್ಯಾನಿಫೆಸ್ಟೇಷನ್ ತುತ್ತಾಗಿರುವ, ತುತ್ತಾಗದೇ ಇರುವ ಕೋವಿಡ್ ಸೋಂಕಿತನ ಕಣ್ಣೀರಲ್ಲಿ ಸೋಂಕು ಇದೆಯೇ ಎಂಬುದನ್ನು ಪತ್ತೆ ಮಾಡಲು ತಂಡ ಮುಂದಾಗಿತ್ತು. ಈ ಅಧ್ಯಯನಕ್ಕೆ ಒಟ್ಟು 120 ರೋಗಿಗಳನ್ನು ಒಳಪಡಿಸಲಾಗಿತ್ತು. ಈ ವೇಳೆ 60 ಮಂದಿಯಲ್ಲಿ ಅಕ್ಯೂಲರ್ ಮ್ಯಾಮಿಫೆಸ್ಟೇಷನ್ ಕಂಡು ಬಂದ್ರೆ, 41 ರೋಗಿಗಳಲ್ಲಿ ಕಣ್ಣು ಕೆಂಪಾಗುವುದು ಕಂಡು ಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ 3,703ಕ್ಕೆ ಏರಿಕೆ- 360 ಡೆತ್

ರಾಜ್ಯದಿಂದ ಹೊರ ರಾಜ್ಯಕ್ಕೆ ಹೋಗುವರಿಗೂ ಕೋವಿಡ್ ಟೆಸ್ಟ್ ಕಡ್ಡಾಯ:
ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ, ರಾಜ್ಯಕ್ಕೆ ಅಪಾಯದ ಮುನ್ಸೂಚನೆ ಬಂದಿದೆ. ಕೇರಳ ಪ್ರಯಾಣಿಕರಿಂದಲೇ ಸೋಂಕು ಹಬ್ಬುವ ಆತಂಕ ಇರುವ ಹಿನ್ನೆಲೆ, ಟಫ್ ರೂಲ್ಸ್ ಗೆ ಸರ್ಕಾರ ಮುಂದಾಗಿದೆ. ರಾಜ್ಯದಿಂದ ಮಹಾರಾಷ್ಟ್ರ, ಕೇರಳಕ್ಕೆ ಹೋಗುವ, ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಅಂತರ್ ರಾಜ್ಯ ಬಸ್ ಹತ್ತಲು ಸ್ಥಳೀಯರಿಗೂ ನೆಗಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.

ಕರ್ನಾಟಕದಿಂದ ಕೇರಳ, ಮಹಾರಾಷ್ಟ್ರಕ್ಕೆ ಹೋಗುವ ರಾಜ್ಯದ ಸ್ಥಳೀಯರು ಕೋವಿಡ್ ನೆಗಟಿವ್ ರಿಪೋರ್ಟ್9 ತೋರಿಸಲೇಬೇಕು. ರೈಲಿನಲ್ಲಿ ಆಗಮಿಸಿದ್ರೆ ಇಳಿಯುವಾಗ ನಿಲ್ದಾಣದಲ್ಲಿ ನೆಗಟಿವ್ ರಿಪೋರ್ಟ್9 ತೋರಿಸಬೇಕು. ನೆಗಟಿವ್ ರಿಪೋರ್ಟ್9 ಇಲ್ಲದಿದ್ದರೆ ಪರೀಕ್ಷೆಗೆ ಒಳಪಡಿಸಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಮಾಡುವಂತೆ ಸ್ಥಳೀಯ ಆಡಳಿತಗಳಿಗೆ ರಾಜ್ಯ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.

ಅಂತರ್ ರಾಜ್ಯಗಳಿಂದ, ರಾಜ್ಯಕ್ಕೆ ಬರುವ ಪ್ರಯಾಣಿಕರ ಬಳಿ 72ಗಂಟೆಯೊಳಗಿನ ಕೊವೀಡ್ ನೆಗಟಿವ್ ರಿಪೋರ್ಟ್9 ಇರಲೇಬೇಕು. ಹೊರ ರಾಜ್ಯದ ಪ್ರಯಾಣಿಕರ ಮೇಲೆ ತೀವ್ರ ನಿಗಾವಹಿಸಲು ಮೆಜೆಸ್ಟಿಕ್, ಯಶವಂತಪುರ, ಕಂಟೋನ್ಮೆಂಟ್, ಕೆ.ಆರ್ ಪುರಂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಬಿಬಿಎಂಪಿ ವಿಶೇಷ ತಂಡಗಳ ರಚನೆ ಮಾಡಿ, ಕೋವಿಡ್ ಪರೀಕ್ಷೆ ನಡೆಸುತ್ತಿದೆ.

Comments

Leave a Reply

Your email address will not be published. Required fields are marked *