ಹೊಸ ವರಸೆ ತೆಗೆದ ಸಂಜನಾ – ಪೊಲೀಸರ ಬಳಿ ಕಣ್ಣೀರು

ಬೆಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ ಪೊಲೀಸರಿಂದ ಬಂಧನಕ್ಕೆ ಒಳಗಾದ ನಟಿ ಸಂಜನಾ ಈಗ ಹೊಸ ವರಸೆ ತೆಗೆದಿದ್ದಾರೆ.

ಸಿಸಿಬಿ ಪೊಲೀಸರ ಜೊತೆ, ದಯವಿಟ್ಟು ಮಾಧ್ಯಮಗಳ ಜೊತೆ ಮಾತನಾಡಲು ಒಂದು ಬಾರಿ ಅವಕಾಶ ಕೊಡಿ ಎಂದು ಕಣ್ಣೀರು ಹಾಕಿದ್ದಾರೆ.

ಒಂದು ಬಾರಿ ಅವಕಾಶ ನೀಡುವಂತೆ ಸಿಬ್ಬಂದಿ ಜೊತೆ ಸಂಜನಾ ರಾತ್ರಿಯೂ ಕೇಳಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಂಧನದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಲು ಸಂಜನಾ ಇಚ್ಛೆ ವ್ಯಕ್ತಪಡಿಸಿದರು.

ಕೆಲವರು ಭಯ ಪಡುವ ರೀತಿಯಲ್ಲೇ ಸಿಸಿಬಿ ವಿಚಾರಣೆ ಆರಂಭದಲ್ಲೇ ನಟಿ ಸಂಜನಾ, ಸ್ಫೋಟಕ ಮಾಹಿತಿಯೊಂದನ್ನು ಬಯಲು ಮಾಡಿದ್ದಾರೆ ಎನ್ನಲಾಗಿದೆ. ಒಟ್ಟು 24 ಮಂದಿ ದೊಡ್ಡ ದೊಡ್ಡವರ ಹೆಸರುಗಳನ್ನು ನಟಿ ಸಂಜನಾ ಗಲ್ರಾನಿ ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಸಂಜನಾ ಹೇಳಿಕೆಯ ಸತ್ಯಾಸತ್ಯತೆಯನ್ನು ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 5 ಹಾಸಿಗೆಯುಳ್ಳ ಒಂದೇ ಕೊಠಡಿಯಲ್ಲಿ ರಾತ್ರಿ ಕಳೆದ ಸಂಜನಾ, ರಾಗಿಣಿ

ಆ 24 ಮಂದಿ ಯಾರು?
ಬೆಂಗಳೂರಿನ ಮಾಜಿ ಶಾಸಕರೊಬ್ಬರ ಪುತ್ರ, ಚಂದನವನದ ಇಬ್ಬರು ಸ್ಟಾರ್ ನಟಿಯರು, ಕಿರುತೆರೆಯ ನಾಲ್ವರು ನಟ, ನಟಿಯರು, ಖ್ಯಾತ ಉದ್ಯಮಿಗಳ ಪುತ್ರರ ಜೊತೆ ಮಂಗಳೂರು, ಯಲಹಂಕ, ಕಮ್ಮನಹಳ್ಳಿಯಲ್ಲಿ ರೆಗ್ಯೂಲರ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದ ಗಣ್ಯ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

14ನೇ ಆರೋಪಿ:
ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಇಂದಿರಾ ನಗರದ ಮನೆ ಮೇಲೆ ರೇಡ್ ಮಾಡಿದ ಸಿಸಿಬಿ ಅಧಿಕಾರಿಗಳು, ಹಲವು ಗಂಟೆ ಶೋಧ ಕಾರ್ಯ ನಡೆಸಿ, ಸಂಜನಾರನ್ನು ಅರೆಸ್ಟ್ ಮಾಡಿದ್ದಾರೆ. ಎಫ್‍ಐಆರ್‌ನಲ್ಲಿ ಸಂಜನಾರನ್ನು ಎ-14 ಎಂದು ಉಲ್ಲೇಖಿಸಲಾಗಿದೆ. ಡ್ರಗ್ ಮಾಫಿಯಾ ಜೊತೆ ನಂಟಿರುವ ಅನುಮಾನದ ಮೇಲೆ ತೀವ್ರ ವಿಚಾರಣೆ ನಡೆಸಲಾಗಿದೆ.

ಮೆಡಿಕಲ್ ಚೆಕಪ್ ಬಳಿಕ ವಸಂತನಗರದ ಸ್ಪೆಷಲ್ ರಿಮ್ಯಾಂಡ್ ಕೋರ್ಟ್‍ಗೆ ಹಾಜರುಪಡಿಸಿ ಸಂಜನಾರನ್ನು ಐದು ದಿನ ಕಸ್ಟಡಿಗೆ ಪಡೆದುಕೊಂಡಿದೆ. ಈ ವೇಳೆ ಕುಸಿದುಬಿದ್ದು, ಕಣ್ಣೀರಿಟ್ಟಿದ್ದಾರೆ. ಸದ್ಯ ಸಂಜನಾರನ್ನು ರಾಗಿಣಿ ಇರುವ ಸಾಂತ್ವಾನ ಕೇಂದ್ರದ ಕೊಠಡಿಯಲ್ಲಿಯೇ ಇರಿಸಲಾಗಿದೆ. ರಾಗಿಣಿ ನಂತರ ಸಂಜನಾ ಅರೆಸ್ಟ್ ಆಗಿದ್ದಾಯ್ತು ಮುಂದೆ ಯಾರು ಅರೆಸ್ಟ್ ಆಗುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಸಂಜನಾ ಬಂಧನದೊಂದಿಗೆ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಹಲವು ಸಿನಿ ನಟರಲ್ಲಿ ಭಯ ಆತಂಕ ಮನೆ ಮಾಡಿದೆ.

Comments

Leave a Reply

Your email address will not be published. Required fields are marked *