ಮಡಿಕೇರಿ: ಹೊಸವರ್ಷ ಮತ್ತು ಕ್ರಿಸ್ಮಸ್ ಹಿನ್ನಲೆ ರಜೆ ಇರುವುದರಿಂದ ಕೊಡಗಿನ ಕಡೆ ಪ್ರವಾಸಿಗರ ದಂಡು ಹೆಚ್ಚಾಗಿ ಬರುತ್ತಿದ್ದು, ಕೊಡಗು ಜಿಲ್ಲೆಯಲ್ಲಿರುವ ಶೇ.90 ರಷ್ಟು ಹೋಂಸ್ಟೇ ಹಾಗೂ ರೆಸಾರ್ಟ್‍ಗಳು ಈಗಾಗಲೇ ಭರ್ತಿಯಾಗಿವೆ.

ಪ್ರಕೃತಿ ಸೌಂದರ್ಯವನ್ನು ಸವಿಯುವ ಜೊತೆಗೆ ಹೊಸವರ್ಷ ಆಚರಣೆಗಾಗಿ ಜನರು ಕೊಡಗಿನತ್ತ ಆಗಮಿಸುತ್ತಿದ್ದಾರೆ. ಕೊಡಗಿನ ಪ್ರವಾಸಿತಾಣಗಳಲ್ಲಿ ಒಂದಾದ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ನಿನ್ನೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಬೆಳಿಗ್ಗೆಯಿಂದ ಮೂರು ಗಂಟೆ ಅವಧಿಯಲ್ಲಿ ಬರೋಬ್ಬರಿ 2000 ರಷ್ಟು ಪ್ರವಾಸಿಗರು ಎಂಟ್ರಿ ಕೋಟ್ಟಿದ್ದಾರೆ.

ಪ್ರವಾಸಿಗರು ಕೊರಾನಾ ಅತಂಕ ಇಲ್ಲದೆ ಮಾಸ್ಕ್ ಗಳನ್ನು ಧರಿಸದೇ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಸಖತ್ ಎಂಜಾಯ್ ಮೆಂಟ್ ಮೂಡ್ ನಲ್ಲಿ ಇದ್ದಾರೆ. ರಾಜ್ಯ, ಹೊರಾ ರಾಜ್ಯ ಹಾಗೂ ವಿದೇಶಗಳಿಂದ ಬಂದಿರುವ ಪ್ರವಾಸಿಗರು ಕಾವೇರಿ ನದಿ ತೀರದಲ್ಲೇ ಹೆಚ್ಚಾಗಿ ಜಾಲಿ ಮೂಡ್‍ನಲ್ಲಿ ಕಾಲ ಕಳೆಯುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.

Leave a Reply