ಹೊನ್ನಾವರದ ಇಕೋ ಬೀಚ್‍ಗೆ ಅಂತರಾಷ್ಟ್ರೀಯ ಮಾನ್ಯತೆ – ಬ್ಲೂ ಫ್ಲ್ಯಾಗ್‌ ಅನಾವರಣ

– ಜಿಲ್ಲಾಧಿಕಾರಿಗಳಿಂದ ಬ್ಲೂ ಫ್ಲ್ಯಾಗ್‌ ಧ್ವಜಾರೋಹಣ

ಕಾರವಾರ: ಹೊನ್ನಾವರದ ಇಕೋ ಬೀಚ್ ಇದೀಗ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆತಿದೆ. ಇಂದಿನಿಂದ ಪ್ರತಿನಿತ್ಯ ಬ್ಲೂ ಫ್ಲ್ಯಾಗ್‌ ಕಡಲತೀರದಲ್ಲಿ ಹಾರಾಡಲಿದೆ. ಬೀಚ್ ಶುದ್ಧ ನೀರು, ಸ್ವಚ್ಛತೆ, ಮೂಲಭೂತ ಸೌಕರ್ಯ, ಸುರಕ್ಷತೆಯನ್ನು ಒಳಗೊಂಡಿದೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್, ಬ್ಲೂ ಫ್ಲಾಗ್ ಆಡಳಿತ ಮಂಡಳಿ ರಾಷ್ಟ್ರೀಯ ಸಂಚಾಲಕ ಸುಜಿತ್ ಕುಮಾರ್ ಡೊಂಗ್ರೆ ಅಧಿಕೃತವಾಗಿ ಇಂದು ಕಡಲತೀರದಲ್ಲಿ ಬ್ಲೂ ಫ್ಲ್ಯಾಗ್‌ ಧ್ವಜಾರೋಹಣ ನಡೆಸಿದರು.

ಡೆನ್ಮಾರ್ಕ್ ನ ಪರಿಸರ ಶಿಕ್ಷಣ ಪ್ರತಿಷ್ಠಾನವೂ ಕಡಲತೀರವನ್ನು ಹಂತ ಹಂತವಾಗಿ ಪರಿಶೀಲನೆ ನಡೆಸಿ ಇತ್ತೀಚೆಗಷ್ಟೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಿತ್ತು. ಅದರಂತೆ ಇಂದು ಧ್ವಜಾರೋಹಣ ನಡೆಸಲಾಗಿದೆ. ಇಕೋ ಬೀಚ್ ಈಗ ಪ್ರವಾಸಿಗರ ಸ್ವರ್ಗವಾಗಿದೆ. ಇಲ್ಲಿ ಅಳವಡಿಸಿರುವ ವಿವಿಧ ಮೂಲ ಸೌಕರ್ಯಗಳು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಜತೆಗೆ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ ಅಲಂಕಾರಿಕ ಪರಿಕರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಈಗ ಇಕೋ ಬೀಚ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಕರ್ನಾಟಕದ ಹೆಮ್ಮೆ ಆಗಿದೆ.

ಕಡಲತೀರದಲ್ಲಿ ಶುದ್ಧ ನೀರು, ಆಸನ ವ್ಯವಸ್ಥೆ, ಪರಿಸರ, ಸ್ವಚ್ಛತೆ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ. ಇದೀಗ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಅಂತರಾಷ್ಟ್ರೀಯ ಹಾಗೂ ದೇಶಿಯ ಪ್ರವಾಸಿಗರಿಗೆ ಸುರಕ್ಷಿತ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *