ಹೊಗಳುಭಟ್ಟರಿಂದ ಸಿದ್ದರಾಮಯ್ಯ ದೂರ ಇರಬೇಕು: ಎಚ್. ವಿಶ್ವನಾಥ್

SIDDU - H.VISHWANATH

ಮೈಸೂರು: ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅವರಿಗೆ ಗೌರವ ಸಿಗುತ್ತಿಲ್ಲ. ಮೊದಲು ಅವರು ಹೊಗಳುಭಟ್ಟರಿಂದ ದೂರ ಇರಬೇಕು ಎಂದು ಎಚ್ ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

ಡಿಕೆಶಿ ಮತ್ತು ಈಶ್ವರಪ್ಪ ಭಯ ಸಿದ್ದರಾಮಯ್ಯಗೆ ಸಾಕಷ್ಟು ಕಾಡುತ್ತಿದೆ. ಅವರಿಂದಲೇ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ ಮಹಾರಾಜರು ಹೊಗಳುಭಟ್ಟರ ನಂಬಿ ಉಳಿದಿಲ್ಲ. ನಿಮಗೆ ಈಗಲೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಕೊರೊನಾ ಲಸಿಕೆ ವಿಚಾರದ ಪ್ರಣಾಳಿಕೆ ಬಿಡುಗಡೆ ವಿಚಾರವನ್ನು ರಾಜಕೀಯಕ್ಕೆ ತರಬೇಡಿ. ವೋಟ್ ಹಾಕಿ ಗೆಲ್ಲಿಸಿದರೆ ಮಾತ್ರ ಲಸಿಕೆ ಕೊಡ್ತೀರಾ? ಸೋಲಿಸಿಬಿಟ್ಟರೆ ಜನರನ್ನ ಸಾಯಿಸಿ ಬಿಡ್ತಿರಾ?. ಯಾವುದೇ ಪಕ್ಷವಾಗಲಿ ಕೊರೊನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮ ಖಾತೆ ಹ್ಯಾಕ್ ಆಗಿದ್ಯಾ- ಕಟೀಲ್ ಪ್ರಶ್ನೆ

ಇದೇ ವೇಳೆ ನಳಿನ್ ಕುಮಾರ್ ಕಟೀಲ್‍ರನ್ನ ಕಾಡುಮನುಷ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಕಾಡು ಮನುಷ್ಯ ಅಂದ್ರೆ ಅರಣ್ಯ ಸಂರಕ್ಷಕರಿಗೆ ಮಾಡುವ ಅಪಮಾನವಾಗಿದೆ. ಈಗ ಎಷ್ಟೋ ಜನ ನಾವು ಕಾಡು ಜನ ಅಂತ ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ರಾಜ್ಯಧ್ಯಾಕ್ಷನನ್ನ ಕಾಡುಮನುಷ್ಯ ಅನ್ನೋದು ಸರಿಯೇ ಎಂದು ಪ್ರಶ್ನಿಸಿದರು.

ನೀವು ನಮ್ಮ ಮೈಸೂರಿನವರು ಭಾಷೆಯ ಮೇಲೆ ಹಿಡಿತ ನಿಮಗೆ ಇರಲಿ. ರಾಜಕೀಯ ಮುತ್ಸುದ್ದಿಯಾಗಿ ಬಳಸಿರುವ ಮಾತುಗಳನ್ನು ವಾಪಸ್ ಪಡೆಯಿರಿ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಎಂಎಲ್‍ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪೋಕರಿ ಕಟೀಲ್ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್: ಸಿದ್ದರಾಮಯ್ಯ

Comments

Leave a Reply

Your email address will not be published. Required fields are marked *