ಹೆತ್ತ ತಾಯಿಯನ್ನೇ ಕಾಮದಾಟಕ್ಕೆ ಕರೆದ ಮಗ – ಸಹೋದರರ ಕೈಯಲ್ಲೇ ಹೆಣವಾದ

ಬಳ್ಳಾರಿ‌: ಹೆತ್ತತಾಯಿಯನ್ನೇ ಕಾಮದಾಟಕ್ಕೆ ಕರೆದಿದ್ದಕ್ಕೆ ರೊಚ್ಚಿಗೆದ್ದು ಸಹೋದರನನ್ನು ಇಬ್ಬರು ಸಹೋದರರು ಕೊಡಲಿಯಿಂದ ಹತ್ಯೆಗೈದ ಘಟನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಹೋಬಳಿಯಲ್ಲಿ ನಡೆದಿದೆ.

ಬಸವರಾಜ (26) ಕೊಲೆಯಾದ ವ್ಯಕ್ತಿ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆಗೆ ಕಾರಣರಾದ ಆ ಇಬ್ಬರ ಬಂಧನಕ್ಕೆ ಕಾನಾಹೊಸಳ್ಳಿ ಪೊಲೀಸರು ಈಗ ಮುಂದಾಗಿದ್ದಾರೆ.

ಏನಿದು ಪ್ರಕರಣ?
ಬಸವರಾಜ ತಾಯಿಯ ಜೊತೆ ಲೈಂಗಿಕ ಸಂಪರ್ಕಕ್ಕೆ ಮಾಡುವಂತೆ ಒತ್ತಾಯಿಸುತ್ತಿದ್ದ. ಈತನ ಕಾಟವನ್ನು ಸಹಿಸಲಾಗದೇ ತಾಯಿ ಈ ವಿಚಾರವನ್ನು ಮಕ್ಕಳ ಬಳಿ ತಿಳಿಸಿದ್ದಾಳೆ.

ಈ ರೀತಿ ಒತ್ತಾಯ ಮಾಡುವುದು ತಪ್ಪು ಎಂದು ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಬುದ್ದಿವಾದ ಹೇಳಿದ್ದರೂ ಕೂಡ ಕಳೆದ‌ ಭಾನುವಾರ ಮನೆಯವರೆಲ್ಲರೂ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತಾಯಿಯನ್ನು ಮತ್ತೆ ಕಾಮದಾಟಕ್ಕೆ ಒತ್ತಾಯಿಸಿದ್ದಾನೆ.

ಈತನ ನಡವಳಿಕೆ ಸಹಿಸದ ತಾಯಿ ಕೆಲಸಕ್ಕೆ ಹೋಗಿದ್ದ ತನ್ನಿಬ್ಬರ ಮಕ್ಕಳಾದ ಕೊಟ್ರೇಶ ಮತ್ತು ವಿರೂಪಾಕ್ಷಿಗೆ ಆಳುತ್ತಾ ಈ ವಿಚಾರವನ್ನು ತಿಳಿಸಿದ್ದಾಳೆ. ಮತ್ತೆ ಹಳೇ ಚಾಳಿ ಮುಂದುವರಿಸಿದ ವಿಚಾರ ತಿಳಿದು ರೊಚ್ಚಿಗೆದ್ದ ಸಹೋದರರು ತಡರಾತ್ರಿ ಬಸವರಾಜನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಆತನನ್ನು ಕೂಡ್ಲಿಗಿಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

Comments

Leave a Reply

Your email address will not be published. Required fields are marked *