ಹೆಣ್ ಹಿಂದೆ ನಾವ್ ಹೋದ್ರೆ ಚೀಪ್, ಅವರು ನಮ್ ಹಿಂದೆ ಬರ್ಬೇಕು- ಶಮಂತ್‍ಗೆ ಸಂಬರಗಿ ಬುದ್ಧಿವಾದ

ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಕಲರವ ಹೆಚ್ಚಾಗಿದೆ. ಆದರೆ ಕೆಲವರಿಗೆ ಮಾತ್ರ ಒಂಟಿತನ ಕಾಡುತ್ತಿದೆ. ಅದರಲ್ಲಿ ಶಮಂತ್ ಸಹ ಒಬ್ಬರು. ಈ ಬಗ್ಗೆ ಅವರೇ ಹಲವು ಬಾರಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಜಂಟಿಯಾಗುವ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಅದೇ ರೀತಿ ಇಂದು ಪ್ರಶಾಂತ್ ಸಂಬರಗಿ ಅವರ ಬಳಿ ಈ ವಿಚಾರದ ಕುರಿತು ಹೇಳಿದ್ದು, ಇದಕ್ಕೆ ಸಂಬರಗಿ ಬುದ್ಧಿವಾದ ಹೇಳಿದ್ದಾರೆ.

ಈ ಬಾರಿ ಮುಂದಿನ ವಾರ ಸುದೀಪ್ ಸರ್ ಶಮಂತ್ ಬಿಟ್ಟರೆ ನೀವು ಯಾರ ಹತ್ತಿರವೂ ಕಾಣಿಸಿಕೊಳ್ಳುವುದಿಲ್ಲವಲ್ಲ ಎಂದು ಹೇಳಬೇಕು, ಹಂಗ್ ಮಾಡ್ತೀನಿ ಎಂದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಅವರು ಕುಳಿತಾಗ ಶಮಂತ್ ಹೇಳುತ್ತಾರೆ. ಆಗ ಪ್ರತಿಕ್ರಿಯಿಸಿದ ಸಂಬರಗಿ, ಸುಮ್ನಿರು ನೀನು ಏನೂ ಮಾಡಬೇಡ. ಅವಾಗ್ಲೆ ಹೇಳಿದಿನಿ, ಹುಡ್ಗೀರನ್ನ ನೀನು ಚೇಸ್ ಮಾಡಬೇಡ, ಅವರು ನಿನ್ನನ್ನು ಚೇಸ್ ಮಾಡಬೇಕು. ಲೈಫ್‍ನಲ್ಲಿ ಪಾಠ ಹೇಳಿಕೊಟ್ಟಿದ್ದೇನೆ ನಿನಗೆ ಎಂದು ಹೇಳಿದ್ದಾರೆ.

ಹೆಣ್ ಹಿಂದೆ ನಾವು ಹೋದರೆ ಚೀಪ್, ಅವರು ನಮ್ಮ ಹಿಂದೆ ಬರಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಮಂತ್, ನಾನು ಯಾರ ಹಿಂದೆ ಹೋದೆ ಇವಾಗ ಎಂದು ಪ್ರಶ್ನಿಸಿದ್ದಾರೆ. ಹೋಗ್ತಿದಿಯಲ್ಲ, ಈಗ ಹೇಳಿದೆಯಲ್ಲ ಎಂದಿದ್ದಾರೆ ಪ್ರಶಾಂತ್. ಈ ಮೂಲಕ ಶಮಂತ್‍ಗೆ ತಿವಿದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿರುವುದು ಹೆಚ್ಚು ಕಂಡುಬರುತ್ತಿದೆ. ಒಂದೆಡೆ ಅರವಿಂದ್, ದಿವ್ಯಾ ಉರುಡುಗ ಮತ್ತೊಂದೆಡೆ ಮಂಜು, ದಿವ್ಯಾ ಸುರೇಶ್ ಜೋಡಿಯಾಗಿದ್ದಾರೆ. ಆದರೆ ಶಮಂತ್‍ಗೆ ಮಾತ್ರ ಒಂಟಿತನ ಕಾಡುತ್ತಿರುತ್ತದೆ. ಈ ಬಗ್ಗೆ ಶಮಂತ್ ದಿವ್ಯಾ ಉರುಡುಗ ಬಳಿ ಮಾತನಾಡಿದ್ದು, ಕಷ್ಟ- ಸುಖ ಹಂಚಿಕೊಳ್ಳಲು ನೀವು ಜೋಡಿಯಾಗಿದ್ದೀರಿ, ನನಗೆ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದರು. ಆಗ ಯಾವುದೇ ವಿಚಾರ ಇದ್ದರೂ ನನ್ನ ಬಳಿ ಹಂಚಿಕೋ ಎಂದು ದಿವ್ಯಾ ಉರುಡುಗ ಹೇಳಿದ್ದರು.

ಇದೀಗ ಕಿಚ್ಚ ಸುದೀಪ್ ಸಹ ವಾರದ ಪಂಚಾಯಿತಿಯಲ್ಲಿ ಭಾಗವಹಿಸದಿದ್ದರೂ, ವಾಯ್ಸ್ ನೋಟ್ ಮೂಲಕ ಸ್ಪರ್ಧಿಗಳಿಗೆ ತಿವಿದಿದ್ದಾರೆ. ಇದರಲ್ಲಿ ಜೋಡಿ ಬಗ್ಗೆ ಸಹ ಮಾತನಾಡಿದ್ದು, ಬೇರೆ ಯಾರೊಂದಿಗೂ ಬೆರೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ಹೊತ್ತಲ್ಲಿ ಹುಡ್ಗೀರಿಗೆ ಹತ್ತಿರವಾಗಲು ಶಮಂತ್ ಪ್ರಯತ್ನಿಸುತ್ತಿದ್ದು, ಇದಕ್ಕೆ ಸಂಬರಗಿಯವರು ಬುದ್ಧಿವಾದ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *