ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಯಲ್ಲೇ ಬಾಣಂತಿ ಸಾವು

ಮಂಡ್ಯ: ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಯೊಬ್ಬರುÂ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಗಳಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಜರುಗಿದೆ.

ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದ ಗುಣಶ್ರೀ (35) ಸಾವನ್ನಪ್ಪಿರುವ ದುರ್ದೈವಿ. ಹಲವು ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದ ಗುಣಶ್ರೀ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ಗುಣಶ್ರೀ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಮಗು ಹುಟ್ಟಿದ ಕೆಲ ಗಂಟೆಯಲ್ಲೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಗುಣಶ್ರೀ ಅವರು ಮಳವಳ್ಳಿ ತಾಲೂಕಿನ ಬೊಮ್ಮನದೊಡ್ಡಿ ಗ್ರಾಮದವರು. ಕಳೆದ ನಾಲ್ಕು ವರ್ಷದ ಹಿಂದೆ ಮದ್ದೂರು ತಾಲೂಕಿನ ಅರೆತಿಪ್ಪೂರಿನ ಮನೋಹರಗೌಡ ಎಂಬವರೊಂದಿಗೆ ಮದುವೆಯಾಗಿದ್ದರು. ಗುಣಶ್ರೀ ಅವರು ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.

ನಾಲ್ಕು ವರ್ಷದಿಂದ ಇವರಿಗೆ ಮಕ್ಕಳಾಗಿರಲಿಲ್ಲ. ಇದೀಗ ಮಗುವಿನ ನೀರಿಕ್ಷೆಯಲ್ಲಿ ಇದ್ದ ಕುಟುಂಬ ಗುಣಶ್ರೀ ಅವರ ಸಾವಿನಿಂದ ದುಃಖತಪ್ತವಾಗಿದೆ. ಇತ್ತ ಒಂದು ದಿನದ ಹಸುಗೂಸು ತಾಯಿಯನ್ನು ಕಳೆದುಕೊಂಡಿರುವುದು ಕಣ್ಣೀರು ತರಿಸುವಂತಿದೆ.

Comments

Leave a Reply

Your email address will not be published. Required fields are marked *