ಹೆಚ್ಚುವರಿ ಬಸ್ ಓಡಿಸದೆ ಲಾಕ್‍ಡೌನ್ ಘೋಷಿಸಿದ್ಯಾಕೆ..?: ಯುವತಿ ಅಸಮಾಧಾನ

ಉಡುಪಿ: ಲಾಕ್‍ಡೌನ್ ಗೆ ಭಯಗೊಂಡು ಜನ ಉಡುಪಿ ಬಿಡುತ್ತಿದ್ದಾರೆ. ಉತ್ತರ ಕರ್ನಾಟಕದ ಕೂಲಿಕಾರ್ಮಿಕರು ರಾಜ್ಯದ ವಿವಿಧ ಭಾಗದ ಉದ್ಯೋಗಿಗಳು ವಿದ್ಯಾರ್ಥಿಗಳು ತಮ್ಮ ಊರಿನ ಹೊರಟಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕೊಪ್ಪಳ ಬಿಜಾಪುರದ ಸಾವಿರಾರು ಜನ ಉಡುಪಿಗೆ ಕೂಲಿ ಅರಸಿ ಬರುತ್ತಾರೆ. ರಾಜ್ಯ ಸರ್ಕಾರ 14 ದಿನ ಜನತಾ ಕಫ್ರ್ಯೂ ಘೋಷಿಸಿರುವುದರಿಂದ ಜನರು ಗಾಯಗೊಂಡಿದ್ದಾರೆ. ಲಾಕ್‍ಡೌನ್ ಮತ್ತೆ ಒಂದು ತಿಂಗಳುಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಭೀತರಾಗಿ ತಮ್ಮ ಊರುಗಳಿಗೆ ಸೇರುತ್ತಿದ್ದಾರೆ.

ಗಂಟು ಮೂಟೆ ಬ್ಯಾಗ್ ಗೋಣಿಚೀಲ ಹೊತ್ತು ಸಾಗುವ ದೃಶ್ಯ ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಕಂಡುಬರುತ್ತಿದೆ. ಹೊರ ಜಿಲ್ಲೆಗೆ ಹೋಗುವ ಖಾಸಗಿ ಸರ್ಕಾರಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಏಕಾಏಕಿ ಲಾಕ್‍ಡೌನ್ ಮಾಡಿ ಸೂಕ್ತ ಸಾರಿಗೆ ವ್ಯವಸ್ಥೆಗಳನ್ನು ಸರ್ಕಾರ ಮಾಡಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಕೌಂಟೆಂಟ್ ಉದ್ಯೋಗಿ ನಾಗರತ್ನ, ನಾನು ಗೀತಾಂಜಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿ. ಶಿರಸಿಗೆ ಹೊರಟಿದ್ದೇನೆ. ಬಸ್ಸಿನಲ್ಲಿ ಐವತ್ತು ಜನ ಮಾತ್ರ ಹಾಕಿ ಅಂತ ಹೇಳುತ್ತಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳು ಇಲ್ಲ. ಬಸ್ ವ್ಯವಸ್ಥೆ ಮಾಡದೆ ಲಾಕ್‍ಡೌನ್ ಘೋಷಿಸಿರುವುದು ಸರಿಯಾ? ಇದೇ ಬಸ್ಸನ್ನು ಕೊನೆಯ ಬಸ್ಸು ಅಂತ ಹೇಳುತ್ತಿದ್ದಾರೆ. ನಾವು ಟಿಕೆಟ್ ತೆಗೆದುಕೊಂಡಿದ್ದೇವೆ. ಸೇಫ್ಟಿ ಇದೆಯಾ ಇಲ್ಲವಾ ಎಂದು ನೋಡೋದಕ್ಕೆ ಆಗುತ್ತಾ? ಹೇಗೋ ಮನೆ ಸೇರಿಕೊಳ್ಳಬೇಕು. ಹದಿನೈದು ದಿವಸ ರಜೆ ಎಂದು ಹೇಳಿದ್ದಾರೆ. ಲಾಕ್‍ಡೌನ್ ಮತ್ತೆ ಮುಂದೆ ಹೋದರೆ ನಮಗೆ ಬಹಳ ಕಷ್ಟ ಆಗುತ್ತದೆ. ಸರ್ಕಾರದಿಂದ ಮುಂದಿನ ಆದೇಶ ಬರುವ ತನಕ ನಾವು ಅಂಗಡಿಗಳನ್ನು ಓಪನ್ ಮಾಡುವುದಿಲ್ಲ ಎಂದು ಮಾಲೀಕರು ಹೇಳಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *