ಮಾಸ್ಕೋ: 8 ತಿಂಗಳ ಹುಲಿಯೊಂದು ಘರ್ಜನೆ ಮಾಡುವ ಬದಲಾಗಿ ಮೆಲೋಡಿಯಸ್ ಆಗಿ ಸೌಂಡ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ರಷ್ಯಾದ ಬುರ್ನಲ್ ಪ್ರಾಣಿ ಸಂಗ್ರಹಾಲಯದಲ್ಲಿರುವ 8 ತಿಂಗಳ ಹುಲಿ ಮರಿ ಮೆಲೋಡಿಯಸ್ ಆಗಿ ಸೌಂಡ್ ಮಾಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದೆ. 2020ರಲ್ಲಿ ಶೆರ್ಹಾನ್ ಎನ್ನುವ ಹುಲಿ 4 ಮರಿಗಳನ್ನು ಹಾಕಿತ್ತು. ಅದರಲ್ಲಿ ಒಂದು ಮರಿ ಧ್ವನಿ ಹೀಗೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.
Eight-month-old #tiger Sherhan
has a #soft_melodic_cry•••— Vincent Menezes (@vincentmenezes) February 23, 2021
ಹುಲಿಯ ಘರ್ಜನೆಗೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಕಾಡಿನ ಯಾವುದೋ ಮೂಲೆಯಲ್ಲಿ ನಿಂತು ಒಮ್ಮೆ ಘರ್ಜಿಸಿದರೆ ನಾವು ಇದ್ದಲ್ಲೇ ಬೆವರುತ್ತೇವೆ. ಆದರೆ ಇಷ್ಟೆಲ್ಲ ಭಯವನ್ನು ಹುಟ್ಟಿಸುವ ವ್ಯಾಘ್ರ ಮೆಲೋಡಿ ವಾಯ್ಸ್‍ನಲ್ಲಿ ಕೂಗುತ್ತಾ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.

Leave a Reply