ಹುಬ್ಬಳ್ಳಿಯಲ್ಲಿ ಮುಂದುವರಿದ ಗಾಂಜಾ ಬೇಟೆ – ಮತ್ತಿಬ್ಬರು ಅಂದರ್

ಹುಬ್ಬಳ್ಳಿ: ನಗರದಲ್ಲಿ ಗಾಂಜಾ ಮಾರಾಟ ಮಾಡೋರ ಬೇಟೆ ಮುಂದುವರಿದಿದ್ದು, ಶಹರ ಠಾಣೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ರಾಜಸ್ಥಾನದ ಜೋಧಪುರದ ಸುಮೇರಸಿಂಗ್ ಮದನಸಿಂಗ್ ರಜಪೂತ ಮತ್ತು ರಾಜಸ್ಥಾನ ಬಾರ್ಡಮೇರ್ ಮೂಲದ, ಮುಂದರಸಿಂಗ್ ನೇಪಾಲಸಿಂಗ್ ರಜಪೂತ ಎಂಬಿಬ್ಬರನ್ನು ಬಂಧನ ಮಾಡಿಲಾಗಿದೆ. ಬಂಧಿತರಿಂದ ಆರು ಕೆಜಿ ಗಾಂಜಾ ಹಾಗೂ ಡಿಯೋ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಸುಮೇರಸಿಂಗ್ ಭೋಜನಾಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ಇಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಲೇ ಗಾಂಜಾ ಮಾರಾಟ ಮಾಡುತ್ತಿದ್ದರು. ಮಾಹಿತಿ ಆಧರಿಸಿ ದಾಳಿ ನಡೆಸಿ, ಮಾಲು ಸಮೇತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ಸ್‍ಪೆಕ್ಟರ್ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿ ಚಂದ್ರು ಚೆಲವಾದಿ, ಸದಾನಂದ ಕಲಘಟಗಿ, ಪ್ರಕಾಶ ಗೋವಿಂದಪ್ಪನವರ, ನಂದೇರ್, ಸಂಗಮೇಶ ಕಟ್ಟಿಮನಿ, ಯಶವಂತ ಮೊರಬ, ಕನಕ ರಗಣಿ, ಶ್ರೀನಿವಾಸ ಯರಗುಪ್ಪಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

Comments

Leave a Reply

Your email address will not be published. Required fields are marked *