ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್, ಪುನೀತ್

ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಸೊಶೀಯಲ್ ಮೀಡಿಯಾದಲ್ಲಿ ಇಬ್ಬರು ಚಿತ್ರತಾರೆಯರಿಗೂ ಶುಭ ಕೋರುತ್ತಿದ್ದಾರೆ.

ಜಗ್ಗೇಶ್ ಅವರು 58ನೇ ವಸಂತಕ್ಕೆ ಕಾಲಿಟ್ಟರೆ, ಪುನೀತ್ ರಾಜ್‍ಕುಮಾರ್ 47ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಚಂದನವನದ ಇಬ್ಬರೂ ಸ್ಟಾರ್‍ಗಳು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಪುನೀತ್ ರಾಜ್‍ಕುಮಾರ್ ಪ್ರತಿವರ್ಷ ತಮ್ಮ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ ಬರ್ತ್‍ಡೇ ಮಾಡಿಕೊಳ್ಳುತ್ತಿದ್ದರು. ಆದರೆ ಈ ಸಲ ಕೊರೊನಾ ಕಾರಣದಿಂದಾಗಿ ಅಭಿಮಾನಿಗಳಿಗೆ ಮನೆಯ ಬಳಿ ಬಾರದಂತೆ ಅಪ್ಪು ಮನವಿ ಮಾಡಿದ್ದಾರೆ. ಕಳೆದ ವರ್ಷವೂ ಇದೇ ಕಾರಣದಿಂದ ಪುನೀತ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ.

ಮಾತೃಪಿತಾಶ್ರೀ ನಂಜಮ್ಮಶಿವಲಿಂಗಪ್ಪ ರವರ ಉದರದಲ್ಲಿ ಜನಿಸಿ 58 ವರ್ಷ. ಕನ್ನಡಿಗರ ಮಡಿಲಲ್ಲಿ 40 ವರ್ಷ. ತಂದೆ-ತಾಯಿ, ರಾಯರು, ಕನ್ನಡಿಗರ ಆಶೀರ್ವಾದ ಹಾಗೂ ಮಾಧ್ಯಮಮಿತ್ರರ ಭುಜತಟ್ಟುವಿಕೆ ಇಲ್ಲಿಯವರೆಗೂ ನಡೆದು ಬಂದಿದ್ದೇನೆ. ನಿಮ್ಮ ಶುಭಹಾರೈಕೆ ನನ್ನ ಶ್ರೀರಕ್ಷೆಯಾಗಿದೆ. ಇಂದು ನಾ ಬಲ್ಲೆ, ನಾಳೆ ರಾಯರು ಬಲ್ಲರು, ಆಶಾದಾಯಕ ಹೆಜ್ಜೆ ಇಡುತ್ತಿರುವೆ ಎಂದು ಬರೆದುಕೊಂಡು ಕೆಲವು ಫೊಟೋಗಳನ್ನು ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ ಜೇಮ್ಸ್ ಕಡೆಯಿಂದ ಇಂದು ಹೊಸ ಪೋಸ್ಟರ್ ಅಭಿಮಾನಿಗಳಿಗೆ ಉಡುಗೊರೆಯಾಗಿ ಸಿಕ್ಕಿದೆ. ಅಲ್ಲದೆ ಬಿಡುಗಡೆಗೆ ಸಿದ್ಧವಾಗಿ ಎಲ್ಲಡೆ ಸಿನಿಮಾದ ಪ್ರಮೋಶನ್ ಮಾಡುತ್ತಿರುವ ಚಿತ್ರವಾದ ಯುವರತ್ನ ಸಿನಿಮಾ ತಂಡದಿಂದ ಒಂದು ಸಾಂಗ್ ಕೂಡಾ ರಿಲೀಸ್ ಆಗಿದ್ದು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಟ್ವೀಟ್‍ರನಲ್ಲಿ ಪುನೀತ್ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಹಾಗೂ ಪುನೀತ್ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಹುಟ್ಟುಹಬ್ಬದಂದು ಉಡುಗೊರೆಯಾಗಿ ಸಿನಿಮಾ ಕುರಿತಾದ ಹೊಸ ಅಪ್ಡೇಟ್ ನೀಡುತ್ತಿದ್ದಾರೆ. ಈ ಇಬ್ಬರೂ ನಟರಿಗೆ ಅಭಿಮಾನಿಗಳು ಹಾಗೂ ಸ್ಟಾರ್‍ಗಳು, ರಾಜಕೀಯನಾಯಕರು ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

Comments

Leave a Reply

Your email address will not be published. Required fields are marked *