ಹೀರೋ ಜೊತೆ ಮಲಗಲು ಡೈರೆಕ್ಟರ್ ಹೇಳಿದ್ರು: ನಟಿ ಕಿಶ್ವೆರ್

ಮುಂಬೈ: ಕಿರುತೆರೆ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಓರ್ವ ಖ್ಯಾತ ನಿರ್ದೇಶಕ, ಒಬ್ಬ ಹೀರೋ ಜೊತೆ ಮಲಗುವಂತೆ ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ. ಆದ್ರೆ ನಿರ್ದೇಶಕ ಮತ್ತು ನಟನ ಹೆಸರನ್ನ ಬಹಿರಂಗಪಡಿಸಿಲ್ಲ.

ಸಿನಿಮಾ ಅವಕಾಶ ಕೇಳಿ ಒಬ್ಬಳೇ ನಿರ್ದೇಶಕರ ಬಳಿ ಹೋದಾಗ ಈ ಅನುಭವ ಆಯ್ತು. ಪ್ರತಿಬಾರಿಯೂ ನನ್ನ ಜೊತೆಯಲ್ಲಿ ಅಮ್ಮ ಇರುತ್ತಿದ್ದರು. ಅಂದು ಒಬ್ಬಳೇ ಹೋದಾಗ ನಿರ್ದೇಶಕರು ಈ ಮಾತುಗಳನ್ನಾಡಿದರು. ನಾನು ನಯವಾಗಿಯೇ ಅವರ ಮಾತುಗಳನ್ನ ತಿರಸ್ಕರಿಸಿ ಅಲ್ಲಿಂದ ಹೊರ ಬಂದೆ. ನಿರ್ದೇಶಕ ಮತ್ತು ನಟ ಇಬ್ಬರು ಖ್ಯಾತನಾಮರು ಅಂತ ಮಾತ್ರ ಕಿಶ್ವೆರ್ ಹೇಳಿದ್ದಾರೆ.

ಚಿತ್ರರಂಗದ ದುನಿಯಾದಲ್ಲಿ ಈ ರೀತಿಯ ಹೆಚ್ಚು ಪ್ರಕರಣಗಳು ನಡೆಯುತ್ತವೆ ಎಂದು ನಾನು ಹೇಳಲ್ಲ. ಆದರೆ ಎಲ್ಲ ಸಿನಿಮಾ ಉದ್ಯಮದಲ್ಲೂ ಈ ರೀತಿಯ ಕೆಲವರು ಇರುತ್ತಾರೆ ಎಂದು ಕಿಶ್ವೆರ ಹೇಳುತ್ತಾರೆ. ಇದನ್ನೂ ಓದಿ: ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

ಕಿಶ್ವೆರ್ ಏಕ್ ಹಸೀನಾ ಥಿ, ಕಹಾಂ ಹಮ್ ಕಹಾಂ ತುಮ್, ದೇಸ್ ಮೇ ನಿಕಾಲಾ ಹೋಗಾ ಚಾಂದ್, ಕಾವ್ಯಾಂಜಲಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಕ ಸುಯಾಶ್ ರಾಯ್ ಜೊತೆ ಮದುವೆಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಿಂದಿ ಬಿಗ್‍ಬಾಸ್ ಸೀಸನ್-9ರಲ್ಲಿಯೂ ಕಿಶ್ವೆರ್ ಭಾಗವಹಿಸಿದ್ದರು. ಇದನ್ನೂ ಓದಿ: ಚಪ್ಪಲಿಯಲ್ಲಿ ಹೊಡೆದ್ರೆ ಕರ್ನಾಟಕ ಬಿಟ್ಟು ತಮಿಳುನಾಡು ಸೇರಬೇಕು: ಕಾಸ್ಟಿಂಗ್ ಕೌಚ್ ಸತ್ಯವನ್ನು ಬಿಚ್ಚಿಟ್ಟ ನಟಿ ಖುಷಿ ಶೆಟ್ಟಿ!

Comments

Leave a Reply

Your email address will not be published. Required fields are marked *