ಹಿಂದೂ ಬಾಲಕಿಯ ಬಲವಂತದ ಮತಾಂತರ – ಮದ್ವೆಯಾದ ಪಾಕ್ ವ್ಯಕ್ತಿ

ಇಸ್ಲಾಮಾಬಾದ್: ಹಿಂದೂ ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾಗಿರುವ ಘಟನೆ ಸಿಂಧ್ ಪ್ರಾಂತ್ಯದ ತಂಗ್ವಾನಿಯಲ್ಲಿ ನಡೆದಿದೆ.

13 ವರ್ಷದ ಬಾಲಕಿಯನ್ನು ಬಹಲ್ಕನಿ ಬುಡಕಟ್ಟಿನ ನಿವಾಸಿಯೊಬ್ಬ ಅಪಹರಿದ್ದು, ಬರೆಲ್ವಿ ಮೌಲ್ವಿ ಮಿಯಾನ್ ಮಿಥೋ ಬಲವಂತವಾಗಿ ಬಾಲಕಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅಪಹರಣಕಾರನೊಂದಿಗೆ ವಿವಾಹ ಮಾಡಿದ್ದಾನೆ.

ಮಾರ್ಚ್ 8 ರಂದು ಐವರು ಆಯುಧಗಳೊಂದಿಗೆ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯವರಿಗೆ ಬೆದರಿಸಿ ಬಾಲಕಿಯನ್ನು ಅಪಹರಿಸಿದ್ದಾರೆ. ಇದೀಗ ಮತಾಂತರಮಾಡಿ ಆಕೆಗೆ ಮದುವೆ ಮಾಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.

ಹೆತ್ತವರ ಆಸೆಗೆ ವಿರುದ್ಧವಾಗಿ ನಾನು ಮದುವೆಯಾಗಿದ್ದೇನೆ. ಹೀಗಾಗಿ ನನ್ನ ಹೆತ್ತವರಿಗೆ ನನ್ನ ಮೇಲೆ ಕೋಪ ಇದೆ. ನನಗೆ 18 ವರ್ಷವಾಗಿದೆ. ನನಗೆ ರಕ್ಷಣೆ ಬೇಕೆಂದು ಎಂದು ಕೋರ್ಟ್ ಮುಂದೆ ಬಾಲಕಿ ಹೇಳಿಕೊಂಡಿದ್ದಾಳೆ.

ಪೊಲೀಸರು ಸಿಂಧ್ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *