ಹಾಸಿಗೆ ನೀಡದೇ ಮೊಂಡಾಟ – 4 ಖಾಸಗಿ ಆಸ್ಪತ್ರೆಗಳ ಮೇಲೆ ಕೇಸ್‌

– ಕೆಪಿಎಂಇ, ಎನ್‌ಡಿಎಂಎ ಕಾಯ್ದೆ ಅಡಿ ಕೇಸ್‌
– ದೂರು ದಾಖಲಿಸಿದ ಬಿಬಿಎಂಪಿ ಆಯುಕ್ತ

ಬೆಂಗಳೂರು: ಹಾಸಿಗೆ ನೀಡದೇ ಮೊಂಡಾಟವಾಡ್ತಿದ್ದ 4 ಖಾಸಗಿ ಆಸ್ಪತ್ರೆಗಳಿಗೆ ಚಳಿ ಬಿಡಿಸಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಈಗ ಪ್ರಕರಣ ದಾಖಲಿಸಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ.50ರಷ್ಟು ಹಾಸಿಗೆಯನ್ನು ಮೀಸಲಿಡಬೇಕು ಎಂದು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿತ್ತು. ಮೀಸಲಿಡದ ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

ಸರ್ಕಾರ ಸೂಚನೆಯನ್ನೂ ಪಾಲಿಸದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆ, ಕೆಂಗೇರಿಯ ಸಂತೋಷ್ ಆಸ್ಪತ್ರೆ, ವರ್ತೂರಿನ ಸಕ್ರಾ ಆಸ್ಪತ್ರೆ ಹಾಗೂ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿನ ಶುಶ್ರೂಷಾ ಆಸ್ಪತ್ರೆ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಮದುವೆ, ಸಮಾರಂಭಕ್ಕೆ ಟಫ್ ರೂಲ್ಸ್ – ಉಲ್ಲಂಘನೆ ಮಾಡಿದ್ರೆ ಅಂಗಡಿ ಮಾಲೀಕನಿಗೆ ದಂಡ

ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೂರು ಆಸ್ಪತ್ರೆಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್‌ ದಾಖಲಾಗಿದೆ.

ಸೆ.16 ರಂದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡದ ಮತ್ತು ಸರ್ಕಾರಕ್ಕೆ ಶೇ.50 ರಷ್ಟು ಹಾಸಿಗೆ ನೀಡದ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್‌ ಜಾರಿ ಮಾಡಿತ್ತು. ನೋಟಿಸ್‌ನಲ್ಲಿ ಮುಂದಿನ ಮುಂದಿನ 48 ಗಂಟೆಗಳ ಒಳಗಾಗಿ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಬೇಕು. 24 ಗಂಟೆಗಳ ಒಳಗಾಗಿ ಪಾಲಿಕೆಯ ಶೋಕಾಸ್‌ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು.

ನೋಟಿಸ್‌ಗೆ ಉತ್ತರ ನೀಡದೆ ಹಾಗೂ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡದೆ ಇದ್ದಲ್ಲಿ, ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡುವುದರ ಜತೆಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಲಾಗಿತ್ತು.

ನೋಟಿಸ್‌ ನೀಡಿದ್ದು ಯಾಕೆ?
ಸೋಂಕಿತರ ಚಿಕಿತ್ಸೆಗೆ ಆನ್‌ಲೈನ್‌ ಪೋರ್ಟ್‌ನಲ್ಲಿ ಹಾಸಿಗೆ ಬ್ಲಾಕ್‌ ಮಾಡಿದರೂ, ದಾಖಲಿಸುವ ವೇಳೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇಲ್ಲ ಎಂದು ಹೇಳಿ ಚಿಕಿತ್ಸೆಗೆ ನಿರಾಕರಿಸಲಾಗುತ್ತಿತ್ತು. ಅಲ್ಲದೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್(ಎಸ್‍ಎಎಸ್‍ಟಿ) ಪೋರ್ಟಲ್‍ನಲ್ಲಿ ವಿವರವಾದ ಮಾಹಿತಿ ನೀಡಿಲ್ಲ ಎಂದು ನೋಟಿಸ್‌ ನೀಡಲಾಗಿತ್ತು.

Comments

Leave a Reply

Your email address will not be published. Required fields are marked *