ಹಾಸನದ ರಸ್ತೆ ಬದಿಯಲ್ಲಿ ಅಪರಿಚಿತ ವ್ಯಕ್ತಿಯ ನರಳಾಟ- ಕೋವಿಡ್‌ ಆಸ್ಪತ್ರೆಗೆ ದಾಖಲು

ಹಾಸನ: ನಗರದ ಅರಳೇಪೇಟೆಯ ರಸ್ತೆ ಬದಿಯಲ್ಲಿ ಅಸ್ವಸ್ಥನಾಗಿ ನರಳುತ್ತಿದ್ದ ಅನುಮಾನಸ್ಪದ ವ್ಯಕ್ತಿ ಓರ್ವನನ್ನು ಅಂಬುಲೆನ್ಸ್‌ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ ನಗರದ ಅರಳೇಪೇಟೆ ರಸ್ತೆಯ ಮನೆಯೊಂದರ ಮುಂದೆ ಮಲಗಿದ್ದು, ರಾತ್ರಿಯಲ್ಲೇ ಅಕ್ಕ-ಪಕ್ಕದ ಮನೆ ಬಾಗಿಲು ಬಡಿದು ಭಯ ಮೂಡಿಸಿದ್ದ. ಬೆಳಿಗ್ಗೆ ಮನೆ ಬಾಗಿಲು ತೆಗೆದು ಎದ್ದು ಹೋಗುವಂತೆ ಹೇಳಿದ್ದಾರೆ. ಆತನು ಮೇಲಕ್ಕೆ ಎದ್ದೇಳಲು ಆಗುತ್ತಿರಲಿಲ್ಲ. ಹೀಗಾಗಿ ಕೊರೊನಾ ಇರುವುದರಿಂದ ಈ ಬೀದಿಯಲ್ಲಿರುವ ನಿವಾಸಿಗಳು ಈತನನ್ನು ನೋಡಿ ಭಯಗೊಂಡಿದ್ದರು.

ಈತ ಯಾರು ಎಂದು ತಿಳಿದಿಲ್ಲ. ಆತನನ್ನು ಕೇಳಿದರೇ ನನ್ನ ಹೆಸರು ಪ್ರಭಾಕರ್ 62 ವರ್ಷ, ಇಲ್ಲೇ ಮನೆಯಿದೆ ಎಂದು ಹೇಳುತ್ತಿದ್ದ. ಇವನ ಮಾತುಗಳು ಕೇಳಿ ಹೆದರಿದ ನಿವಾಸಿಗಳು 108 ತುರ್ತು ವಾಹನಕ್ಕೆ ಕರೆ ಮಾಡಿದ್ದರು.

ಈತನ ಬಳಿ ಬೆಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಕೆಲ ಮಾಹಿತಿಗಳು ಲಭ್ಯವಾಗಿದೆ. ಅಲ್ಲಿಂದ ಇಲ್ಲಿಗೆ ಹೇಗೆ ಬಂದಿರಬಹುದು? ಇಂದಿನಿಂದ ಬೆಂಗಳೂರು ಲಾಕ್‍ಡೌನ್ ಇರುವುದರಿಂದ ತಪ್ಪಿಸಿಕೊಂಡು ಬಂದಿರಬಹುದೇ, ಇಲ್ಲವೇ ಕೊರೊನಾದಿಂದ ನರಳುತ್ತಿರಬಹುದೇ ಎಂಬ ಅನುಮಾನಗಳು ಮೂಡಿದೆ.

Comments

Leave a Reply

Your email address will not be published. Required fields are marked *