ಹಾವೇರಿಯಲ್ಲಿ ಎಎಸ್‍ಐ, ವೈದ್ಯ, ಶಿಕ್ಷಕ, ಆಶಾ ಕಾರ್ಯಕರ್ತೆಯರು ಸೇರಿ 15 ಜನರಿಗೆ ಕೊರೊನಾ

– ಓರ್ವ ಸೋಂಕಿತ ಮನೆಯಿಂದ ಎಸ್ಕೇಪ್, ಪೊಲೀಸರ ಹುಡುಕಾಟ

ಹಾವೇರಿ: ಜಿಲ್ಲೆಯಲ್ಲಿ ಇಂದು 15 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಹಾನಗಲ್‍ನಲ್ಲಿ ಮೂವರು ಆಶಾ ಕಾರ್ಯಕರ್ತೆಯರು ಸೇರಿ ಐವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

ಹಾವೇರಿ ತಾಲೂಕಿನಲ್ಲಿ ಓರ್ವ ಬಾಣಂತಿ ಮಹಿಳೆ, ಓರ್ವ ಎಎಸ್‍ಐ, ಓರ್ವ ಶಿಕ್ಷಕ, ಓರ್ವ ವೈದ್ಯ ಸೇರಿದಂತೆ ಐವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಶಿಗ್ಗಾಂವಿ ಪಟ್ಟಣದ ಕಂಟೈನ್ಮೆಂಟ್ ಝೋನ್ ನ ರೋಗಿ ನಂ.9412 ಸಂಪರ್ಕದಿಂದ ಮೂವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಅಲ್ಲದೆ ರಟ್ಟೀಹಳ್ಳಿ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಹದಿನೈದು ಪ್ರಕರಣಗಳಲ್ಲಿ ಹದಿನಾಲ್ಕು ಜನರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಷ್ಟೆಲ್ಲ ಪ್ರಕರಣ ಪತ್ತೆಯಾಗುತ್ತಿರುವುದರ ಮಧ್ಯೆ ಓರ್ವ ಕೊರೊನಾ ಸೋಂಕಿತ ವ್ಯಕ್ತಿ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ತಪ್ಪಿಸಿಕೊಂಡಿರುವ ಸೋಂಕಿತನಿಗಾಗಿ ರಟ್ಟೀಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 166ಕ್ಕೆ ಏರಿಕೆ ಆಗಿದೆ. ಸೋಂಕಿತರು ವಾಸ ಇರುವ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.

Comments

Leave a Reply

Your email address will not be published. Required fields are marked *