ಹಾವುಗಳ ಮಧ್ಯೆ ಸಿಲುಕಿಕೊಂಡ ವ್ಯಕ್ತಿ – ವೀಡಿಯೋ ವೈರಲ್

ಸಾಕ್ರಮೆಂಟೊ: ಭಾರೀ ಗಾತ್ರದ ಹಾವುಗಳ ರಾಶಿ ಮಧ್ಯೆ ವ್ಯಕ್ತಿಯೊಬ್ಬ ಧೈರ್ಯದಿಂದ ಕುಳಿತುಕೊಂಡು ಮಾತನಾಡುತ್ತಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಈ ಭಯಾನಕ ದೃಶ್ಯವನ್ನು ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದಲ್ಲಿ ಸೆರೆ ಹಿಡಿಯಲಾಗಿದ್ದು, ಮೃಗಾಲಯದ ಸಂಸ್ಥಾಪಕ ಜೇ ಬ್ರೂಯರ್ ಹಾವುಗಳ ಮಧ್ಯೆ ಕುಳಿತುಕೊಂಡಿರುತ್ತಾನೆ. ಆತನ ಸುತ್ತ ಎಲ್ಲಾ ಗಾತ್ರದ ವಿವಿಧ ಬಣ್ಣದ ಹಾವುಗಳು ಹರಿದಾಡುತ್ತಿರುತ್ತವೆ. ಈ ವೇಳೆ ಮೇಲೆ ಹರಿದಾಡುತ್ತಿದ್ದ ಹಾವುಗಳು ಆತನ ಮೈಮೇಲೆ ಬಿದ್ದಾಗ ನಾನು ಹಾವುಗಳ ಮಧ್ಯೆ ಸಿಲುಕಿಕೊಂಡಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ.

2019ರಲ್ಲಿ ಈ ವೀಡಿಯೋವನ್ನು ಮೃಗಾಲಯ ಶೇರ್ ಮಾಡಿಕೊಂಡಿದ್ದು, ಇದೀಗ ಟ್ವಿಟ್ಟರ್ ಬಳಕೆದಾರರೊಬ್ಬರು ಮರು ಪೋಸ್ಟ್ ಮಾಡುವ ಮೂಲಕ ವೀಡಿಯೋಗೆ ಪುನರ್ ಜೀವ ನೀಡಿದ್ದಾರೆ. ಅಲ್ಲದೆ 50 ಮಿಲಿಯನ್ ಡಾಲರ್‍ಗಳು ಬೇಕಾದರೆ ನಿಮ್ಮಲ್ಲಿ ಯಾರಾದರೂ ಒಂದು ಗಂಟೆಗಳ ಸಮಯವನ್ನು ಇಲ್ಲಿ ಕಳೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

https://twitter.com/Aqualady6666/status/1356859859782815745

12 ಸೆಕೆಂಡ್ ಇರುವ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 3,5000 ಲೈಕ್ಸ್ ಬಂದಿದೆ.

Comments

Leave a Reply

Your email address will not be published. Required fields are marked *