ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸ್ತಿದ್ದ ವ್ಯಕ್ತಿಯ ಬಂಧನ

– ಸಿಸಿಟಿವಿಯಲ್ಲಿ  ವ್ಯಕ್ತಿಯ ದುರ್ವರ್ತನೆ ಸೆರೆ

ತಿರುವನಂತಪುರಂ: ಹಸುವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೋಯಿಕ್ಕೋಡ್ ನ ಕುನ್ನಮಂಗಕಂ ಎಂಬಲ್ಲಿ ನಡೆದಿದೆ. ವ್ಯಕ್ತಿಯ ವಿಚಿತ್ರ ವರ್ತನೆ ಸಿಸಿಟಿಯಲ್ಲಿ ಸೆರೆಯಾಗಿದೆ.

ಆರೋಪಿಯನ್ನು ಮುರಳೀಧರನ್ ಎಂದು ಗುರುತಿಸಲಾಗಿದೆ. ಈತ ಎರ್ನಾಕುಲಂ ಮೂಲದವನಾಗಿದ್ದು, ಕೋಯಿಕ್ಕೋಡ್ ನ ವಲಿಯವಯಾಲ್ ಮುಲ್ಲೆರಿಕುನುಮೆಲ್ ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ವಾಸವಿದ್ದ 12 ಮೈಲಿ ದೂರದಲ್ಲಿದ್ದ ಚಥಮಂಗಲಂ ಎಂಬವರ ಮನೆಯ ಹಸುವಿನ ಮೇಲೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ರಾತ್ರಿ ಎಲ್ಲರೂ ಮಲಗಿದ ಬಳಿಕ ಆರೋಪಿ ಚಥಮಂಗಲಂ ನಿವಾಸದ ಬಳಿ ಬಂದು ಕೊಟ್ಟಿಗೆಯಿಂದ ಹಸುವನ್ನು ಬಿಚ್ಚಿಕೊಂಡು ಹೊರಗಡೆ ಕರೆದೊಯ್ಯುತ್ತಾನೆ. ಬಳಿಕ ಅದರ ಮೇಲೆ ಅಸಹಜ ಲೈಂಗಿಕ ಕ್ರಿಯೆ ಎಸಗುತ್ತಿದ್ದನು. ತನ್ನ ಕಾಮ ತೃಷೆ ತೀರಿಸಿಕೊಂಡ ನಂತರ ಹಸುವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗುತ್ತಿದ್ದನು.

ಹೀಗೆ ಅನೇಕ ಬಾರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಬೆಳಗಾಗುವಾಗ ಇಲ್ಲದಿರುವುದರಿಂದ ಆತಂಕಗೊಂಡ ಮಾಲೀಕ ಕುಂತಮಂಗಳಂ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಮಾಲೀಕ ಕೊಟ್ಟಿಗೆಯ ಬಳಿ ಸಿಸಿಟಿವಿ ಕೂಡ ಫಿಕ್ಸ್ ಮಾಡಿದರು. ಹೀಗಾಗಿ ವ್ಯಕ್ತಿಯ ದುರ್ವರ್ತನೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ನೀಚ ಕೃತ್ಯ ಬಯಲಾಗಿದೆ.

ಹಸುವನ್ನು ಪಶುವೈದ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅದರ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆದಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *