ಹಲಸಿನ ಹಣ್ಣಿನಲ್ಲಿ ವಿಷವಿಕ್ಕಿದ ಪಾಪಿಗಳು- ಹಣ್ಣು ತಿಂದ ಹಸುಗಳು ರಕ್ತಕಾರಿ ಸಾವು

ಹಾಸನ: ವಿಷಪೂರಿತ ಹಲಸಿನ ಹಣ್ಣು ತಿಂದ ಹಸುಗಳು ರಕ್ತಕಾರಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗಾವೆ ಗ್ರಾಮದಲ್ಲಿ ನಡೆದಿದೆ.

ಹೆಗ್ಗಾವೆ ಗ್ರಾಮದ ಮೂವರು ರೈತರ ಆರು ಹಸುಗಳು ಸಾವನ್ನಪ್ಪಿದ್ದು, ಜಾನುವಾರಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಅನ್ನದಾತರು ಕಂಗಾಲಾಗಿದ್ದಾರೆ. ಎರಡು ಹಸುಗಳು ವಿಷ ಮಿಶ್ರಿತ ಹಣ್ಣು ತಿಂದ ಸ್ಥಳದಲ್ಲಿ ಸಾವನ್ನಪ್ಪಿವೆ. ಉಳಿದ ಹಸುಗಳು ಕೊಟ್ಟಿಗೆಗೆ ಬಂದು ಪ್ರಾಣ ಬಿಟ್ಟಿವೆ.

ಹಸುಗಳನ್ನು ವಿಷ ಹಾಕಿ ಕೊಂದವರಿಗೆ ಆ ದೇವರು ಖಂಡಿತ ಒಳ್ಳೆಯದು ಮಾಡಲ್ಲ. ಅವರೂ ಕೂಡ ನರಳಿ ನರಳಿ ಸಾಯುತ್ತಾರೆ ಎಂದು ಹಸುವಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *