ಹರ್ಯಾಣ, ದೆಹಲಿಯಲ್ಲಿ ಲಘು ಭೂಕಂಪ

ನವದೆಹಲಿ: ಹರ್ಯಾಣ ಮತ್ತು ದೆಹಲಿ ಸುತ್ತ ಲಘು ಭೂಕಂಪನವಾಗಿದೆ.

ರಾತ್ರಿ 10:36ಕ್ಕೆ ಹರಿಯಾಣದ ಜಜ್ಜಾರ್ ನಿಂದ ಉತ್ತರಕ್ಕೆ 10 ಕಿ.ಮೀ ದೂರದ 5 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆ ಆರಂಭಿಸುವುದಾಗಿ ಘೋಷಿಸಿದ ಯಡಿಯೂರಪ್ಪ

ರಿಕ್ಟರ್ ಮಾಪನದಲ್ಲಿ 3.7 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದಿಂದ ಮಾಹಿತಿ ನೀಡಿದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಜನ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *