ಹಣೆಯಲ್ಲಿರೋ ಕುಂಕುಮ ತೆಗೆದು ಮತಾಂತರವಾಗುವಂತೆ ಒತ್ತಡ – ಓರ್ವ ಅರೆಸ್ಟ್

– ಬೆಂಗಳೂರಿನಲ್ಲೊಂದು ಲವ್ ಜಿಹಾದ್ ಪ್ರಕರಣ

ಬೆಂಗಳೂರು: ಲವ್ ಜಿಹಾದ್ ನಡೆಸಿದ್ದ ಹಿನ್ನೆಲೆಯಲ್ಲಿ ಸಿ.ಕೆ ಅಚ್ಚುಕಟ್ಟು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಶಬ್ಬೀರ್ ಅಹಮ್ಮದ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ರಿಜ್ವಾನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಮುಖ ಆರೋಪಿಯಾಗಿರುವ ರಿಜ್ವಾನ್ 2018ರಲ್ಲಿ ಹಿಂದೂ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಈ ಪರಿಚಯ ಪ್ರೀತಿಗೆ ತಿರುಗಿದ್ದು, 2020ರ ನವೆಂಬರ್ ತಿಂಗಳಲ್ಲಿ ಇಬ್ಬರೂ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ.

ಮದುವೆಯ ಬಳಿಕ ರಿಜ್ವಾನ್, ಹಣೆಯಲ್ಲಿರುವ ಕುಂಕುಮ ತೆಗೆದು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಪೀಡಿಸಲು ಆರಂಭಿಸಿದ್ದಾನೆ. ಅಲ್ಲದೆ ದುಬೈನಲ್ಲಿ ನಿನಗೆ ಕೆಲಸ ಕೊಡಿಸುತ್ತೇನೆ. ಅಲ್ಲಿಯೇ ನಾವು ಸೆಟ್ಲ್ ಆಗೋಣ ಎಂದು ಯುವತಿಗೆ ಕಿರುಕುಳ ನೀಡುತ್ತಿದ್ದನು.

ಆರೋಪಿಗಳಾದ ಶಬ್ಬಿರ್ ಮತ್ತು ರಿಜ್ವಾನ್ ಸಹೋದರರು. ಸದ್ಯ ಈ ಇಬ್ಬರ ವಿರುದ್ಧ ಯುವತಿ ಮೇಲೆ ಅತ್ಯಾಚಾರಗೈದ ಆರೋಪವಿದೆ. ಈ ಸಂಬಂಧ ಸಿ.ಕೆ ಅಚ್ಚುಕಟ್ಟು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *