ಸ್ವಾರ್ಥ ಮೋಸ ಧನದಾಹಿ ಜಗತ್ತು, ಒಳ್ಳೆಯವರಿಗಲ್ಲ ಇಂದಿನ ಜಗತ್ತು : ಜಗ್ಗೇಶ್

ಬೆಂಗಳೂರು: ಕೊರೊನಾ ಮಹಾಮಾರಿ ಮನುಜ ಕುಲ ನಾಶವಾಗುತ್ತಿದೆ. ಈ ಕುರಿತಾಗಿ ನವರಸ ನಾಯಕ ಜಗ್ಗೇಶ್ ಅವರ ಆತ್ಮೀಯರನ್ನು ಕಳೆದುಕೊಂಡ ದುಃಖವನ್ನು ಟ್ವೀಟ್ ಮಾಡುವ ಮೂಲಕವಾಗಿ ಹೊರಹಾಕಿದ್ದಾರೆ.

ಬಹುವರ್ಷಗಳಿಂದ ಜಗ್ಗೇಶ್ ಅವರ ಜೊತೆಯಲ್ಲಿರುವ ಅವರ ಮೇಕಪ್ ಕಲಾವಿದ ಮಾದೇಗೌಡ, ಜಗ್ಗೇಶ್ ಅವರಿಗೆ ತುಂಬಾ ಆತ್ಮೀಯರು. ಇದೀಗ ಮಾದೇಗೌಡ ಮಗ ಕೊರೊನಾಗೆ ಬಲಿಯಾಗಿದ್ದಾರೆ. ಈ ದುಃಖವನ್ನು ಜಗ್ಗೇಶ್ ಅವರು ಸಾಲು ಸಾಲು ಟ್ವೀಟ್ ಮಾಡುವ ಮೂಲಕವಾಗಿ ಜನರಿಗೆ ಜಾಗೃತಿಯನ್ನು ಮೂಡಿಸಿದ್ದಾರೆ.

ನನ್ನಉಸಿರಿನಂತೆ ಬೆನ್ನಿಗೆ ನಿಂತು ನನ್ನಬದುಕಿನ ಬಹುಭಾಗ ಒಡಹುಟ್ಟಿದವನಂತೆ ಬಾಳಿದವ ಮಾದೇಗೌಡ. ಅವನ ಮಗನನ್ನು ಈ ಪೀಡೆರೋಗ ನುಂಗಿಹಾಕಿದೆ. ಇದ್ದವನು ಒಬ್ಬನೇ ಮಗ ಮಸಣಸೇರಿಬಿಟ್ಟ. ಬಹಳ ನೊಂದು ಹೋಗಿರುವೆ, ನನ್ನ ಮಗನಿಗಿಂತ 1ವರ್ಷ ಕಿರಿಯವನಾಗಿದ್ದನು. ಅವನಿಗೆ ಮಗಳು ಹುಟ್ಟಿ6ತಿಂಗಳು ಆಗಿದೆ. ಈ ದುಃಖವನ್ನು ಮಾದೆಗೌಡ ಹೇಗೆ ಸಹಿಸುತ್ತಾನೆ..? ನನ್ನದೇಹವೆ ಸುಟ್ಟಂತೆ ಆಗಿದೆ.ಕ್ರೂರವಿಧಿ ಎಂದು ಬರೆದುಕೊಂಡು ಕಣ್ಣೀರು ಹಾಕಿದ್ದಾರೆ.

ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ. ಮಾದೇಗೌಡನ ಮಗನ ಸಾವಿನಿಂದ ನನ್ನಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರು ಸಮಾಧಾನ ಆಗುತ್ತಿಲ್ಲ. ಬಂಗಾರದಂತ ನನ್ನ ಆತ್ಮೀಯ ಹೃದಯಗಳೇ ನಿಮ್ಮ ನೀವು ಕಾಪಾಡಿಕೊಳ್ಳಿ ಯಾರು ನಮಗಾಗಿ ಬರುವುದಿಲ್ಲ. ಇಂದಿನ ಯಾಂತ್ರಿಕ ಚಿಂತನೆ ಜಗದಲ್ಲಿ. ಸ್ವಾರ್ಥ ಮೋಸ ಧನದಾಹಿ ಜಗತ್ತು. ಒಳ್ಳೆಯವರಿಗಲ್ಲ ಇಂದಿನ ಜಗತ್ತು..ಕ್ಷಮೆಯಿರಲಿ ಎಂದು ಬರೆದುಕೊಂಡು ಆಪ್ತನ ಮಗನನ್ನುಕಳೆದುಕೊಂಡಿರುವ ದುಃಖದ ನುಡಿಗಳನ್ನಾಡಿದ್ದಾರೆ.

Comments

Leave a Reply

Your email address will not be published. Required fields are marked *