ಸ್ವಾರ್ಥ, ಬೌದ್ಧಿಕ ದಿವಾಳಿತನದಲ್ಲಿ ಕ್ರಿಕೆಟಿಗರು ಸಿನಿಮಾ ತಾರೆಯರನ್ನೂ ಮೀರಿಸಿದ್ದಾರೆ: ನಟ ಚೇತನ್

ಬೆಂಗಳೂರು: ಸ್ವಾರ್ಥ, ಬೌದ್ಧಿಕ ದಿವಾಳಿತನ ಮತ್ತು ಬೆನ್ನುಮೂಳೆಗಳನ್ನು ಕಳೆದುಕೊಂಡ ಹೇಡಿತನದಲ್ಲಿ ಭಾರತೀಯ ಕ್ರಿಕೆಟಿಗರು ಸಿನಿಮಾ ತಾರೆಯರನ್ನೂ ಸಹ ಮೀರಿಸಿದ್ದಾರೆ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದಾರೆ. ಈ ಕುರಿತಾಗಿ ಹಲವು ಸೆಲೆಬ್ರಿಟಿಗಳು ಟ್ವೀಟ್ ಮಾಡುವ ಮೂಲಕವಾಗಿ ಬೆಂಬಲ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಚೇತನ್ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಏನಿದೆ..?
ಅತ್ಯಂತ ಸ್ವಾರ್ಥಿಗಳು, ಬೌದ್ಧಿಕವಾಗಿ ದುರ್ಬಲರು, ಹೇಡಿತನಕ್ಕೆ ಪ್ರಸಿದ್ದರಾದವರು ಕೇವಲ ಭಾರತೀಯ ಚಲನಚಿತ್ರ ನಟರು ಮಾತ್ರವಲ್ಲ. ಇನ್ನು ಮುಂದೆ ಆ ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು ಮುನ್ನಡೆ ಸಾಧಿಸಲಿದ್ದಾರೆ. ಚೆಂಡಿನೊಂದಿಗೆ ಆಟವಾಡಲು ಮಿದುಳು ಅಥವಾ ಹೃದಯದ ಅವಶ್ಯಕತೆ ಹೆಚ್ಚು ಬೇಕಿಲ್ಲ ಎಂದುಬು ನಮಗೆ ಗೊತ್ತೆ ಇದೆ ಎಂದು ಹೇಳುವ ಮೂಲಕ ಕ್ರಿಕೆಟಿಗರ ಹೆಸರೇಳದೆ ಚೇತನ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ವೇಳೆ 150ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೆ ಈವರೆಗೆ ಯಾವ ಬಾಲಿವುಡ್ ನಟ-ನಟಿಯರು ಕ್ರಿಕೆಟಿಗರು ಈ ಕುರಿತು ಧ್ವನಿ ಎತ್ತಿರಲಿಲ್ಲ. ಕಳೆದ ಕೆಲದಿನಗಳಿಂದ ದೆಹಲಿಯಲ್ಲಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಅಮೆರಿಕದ ಖ್ಯಾತ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡುತ್ತಿದ್ದಂತೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಣಾವತ್ ಈ ಟ್ವೀಟ್ ವಿರೋಧಿಸಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದ್ದರು. ರೈತರ ಹೋರಾಟ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಇದನ್ನೂ ಓದಿ: ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್

Comments

Leave a Reply

Your email address will not be published. Required fields are marked *