ಸ್ವತಃ ಲಸಿಕೆ ಪಡೆದ ಸೆರಮ್ ಇನ್ಸ್ ಸ್ಟಿಟ್ಯೂಟ್ ಸಿಇಒ ಆದರ್ ಪೂನಾವಾಲ

ಮುಂಬೈ: ಸೆರಮ್ ಇನ್ಸ್ ಸ್ಟಿಟ್ಯೂಟ್ ಸಿಇಒ ಆದರ್ ಪೂನಾವಾಲ ಸ್ವತಃ ಲಸಿಕೆ ಪಡೆಯುವ ಮೂಲಕ ಕೊವಿಶೀಲ್ಡ್ ಲಸಿಕೆಯ ಸುರಕ್ಷತೆ ಅನುಮೋದಿಸಿದ್ದಾರೆ. ಪ್ರಧಾನಿ ಮೋದಿ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಪೂನಾವಾಲ ಲಸಿಕೆ ಪಡೆದುಕೊಂಡರು.

ಆದರ್ ಪೂನಾವಾಲ ಅವರ ಕಂಪನಿ ಸೆರಮ್ ಸಂಸ್ಥೆ, ಬ್ರಿಟನ್‍ನ ಆಕ್ಸ್ ಫರ್ಡ್ ವಿವಿಯ ಆಸ್ಟ್ರಾಜೆನಿಕಾ ಜೊತೆ ಕೈ ಜೋಡಿಸಿ ಪುಣೆಯಲ್ಲಿ ಕೊವಿಶೀಲ್ಡ್ ಲಸಿಕೆಯನ್ನು ಸಿದ್ಧಪಡಿಸಿದೆ. ಒಬ್ಬ ವ್ಯಕ್ತಿ ಮಂಚದ ಮೇಲೆ ಕುಳಿತಿದ್ದು, ಮಾಸ್ಕ್ ಧರಿಸಿರುವ ಇನ್ನೂಬ್ಬ ವ್ಯಕ್ತಿ ಆತನಿಗೆ ಲಸಿಕೆ ನೀಡುತ್ತಿರುವ ದೃಶ್ಯವನ್ನು ಟ್ಟೀಟರ್‍ನಲ್ಲಿ ಪೋಸ್ಟ್ ಮಾಡಿರುವ ಪೂನಾವಾಲ ಇದು ಲಸಿಕೆಗೆ ಇರುವ ಸುರಕ್ಷತೆ ಮತ್ತು ಪರಿಣಾಮಕಾರಿಯನ್ನು ತಿಳಿಸುತ್ತದೆ. ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡುವ ಆದ್ಯತೆ ಎಂದು ಬರೆದುಕೊಂಡಿದ್ದಾರೆ.

ನಾನು ವಿಶ್ವದ ಅತೀ ದೊಡ್ಡ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಯಶಸ್ಸನ್ನು ಗೌರವಿಸುತ್ತೇನೆ. ಕೊವಿಶೀಲ್ಡ್ ಈ ಐತಿಹಾಸಿಕ ಪ್ರಯತ್ನದ ಭಾಗವಾಗಿದೆ ಮತ್ತು ಇದರ ಸುರಕ್ಷತೆ ಮತ್ತು ಇದರಿಂದಾಗುವ ಪರಿಣಾಮವನ್ನು ತಿಳಿಸಲು ನಾನು ನಮ್ಮ ಆರೋಗ್ಯ ಕಾರ್ಯಕರ್ತರೊಂದಿಗೆ ಲಸಿಕೆ ಪಡೆಯಲು ಬಯಸುತ್ತೇನೆ ಎಂದು ಪೂನಾವಾಲ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳನ್ನು ಶ್ಲಾಘಿಸಿ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಎರಡು ಲಸಿಕೆಗಳ ದತ್ತಾಂಶವನ್ನು ಪರೀಕ್ಷಿಸಿದ ನಂತರ ಬಳಕೆಗೆ ಅನುಮೋದನೆ ನೀಡಿದೆ. ಹಾಗಾಗಿ ವದಂತಿಗಳ ಕಡೆ ಕಿವಿ ಕೊಡಬೇಡಿ, ಲಸಿಕೆಯು ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ್ದೇವೆ ಎಂದು ಸಂತಸ ಹಂಚಿಕೊಂಡರು.

https://twitter.com/adarpoonawalla/status/1350338040321851392

ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೊವ್ಯಾಕ್ಸಿನ್ ಅನ್ನು ತುರ್ತು ಬಳಕೆಗೆ ಅನುಮತಿ ಕೋಡಲಾಗಿದೆ ಕೊವಿಶೀಲ್ಡ್ 3 ಹಂತದ ಪರೀಕ್ಷೆ ಒಳಪಟ್ಟು ಕಾನೂನಿನ ಪ್ರಕಾರ ಕ್ಲಿನಿಕಲ್ ಟ್ರಯಲ್ ಮಾಡಿಸಿ ಶೇ.70.42 ರಷ್ಟು ಪರಿಣಾಮಕಾರಿಯನ್ನು ಪಡೆದುಕೊಂಡಿದೆ. ಕೊವ್ಯಾಕ್ಸಿನ್ ಎರಡು ಹಂತ ಪೂರ್ಣಗೊಳಿಸಿ ಮೂರನೇ ಹಂತದ ಪ್ರಯೋಗದಲ್ಲಿದೆ.

ಈ ಲಸಿಕೆಗಳ ಕುರಿತು ಹಲವು ಟೀಕೆಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಆದರೆ ಸರ್ಕಾರ ಇದರ ಒಂದು ಮತ್ತು ಮೂರನೇ ಪ್ರಯೋಗಗಳ ನಂತರ ಇದರಲ್ಲಿ ಅಪಾರ ಪ್ರಮಾಣದ ಇಮ್ಯುನೂಜೆನೆಸಿಟಿ ಮತ್ತು ಸುರಕ್ಷತಾ ದತ್ತಾಂಶ ಇದೆ ಎಂದು ಖಾತ್ರಿ ಪಡಿಸಿ ಜನರಿಗೆ ನೀಡಲು ಮುಂದಾಗಿದೆ.

Comments

Leave a Reply

Your email address will not be published. Required fields are marked *