ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾ ಅರೆಸ್ಟ್

– 4 ತಿಂಗಳ ಬಳಿಕ ಪೊಲೀಸರ ಬಲೆಗೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ ಓರ್ವನಾಗಿದ್ದ ಆದಿತ್ಯ ಆಳ್ವಾನನ್ನ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆ ತರಲಾಗಿದೆ.

ಕಳೆದ ನಾಲ್ಕು ತಿಂಗಳಿನಿಂದ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಈತನ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದು ಎನ್ನಲಾಗಿದೆ. ನಟಿ ರಾಗಿಣಿ ದ್ವಿವೇದಿ, ವೈಭವ್ ಜೈನ್ ಸೇರಿದಂತೆ ಹಲವರ ಜೊತೆ ಆದಿತ್ಯ ಆಳ್ವಾ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ದಿವಂಗತ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರನಾಗಿರುವ ಆದಿತ್ಯನ ಹುಡುಕಾಟಕ್ಕಾಗಿ ಮುಂಬೈನಲ್ಲಿರು ಬಾವ ನಟ ವಿವೇಕ್ ಓಬೇರಾಯ್ ಮನೆ ಮೇಲೆಯೂ ದಾಳಿ ನಡೆಸಿದ್ದರು.

ಸದ್ಯ ಚೆನ್ನೈನಲ್ಲಿ ಬಂಧಿಸಲಾಗಿರುವ ಬಗ್ಗೆ ಮಾಹಿತಿಗಳು ತಿಳಿದು ಬಂದಿದ್ದು, ಇಷ್ಟು ದಿನ ಎಲ್ಲಿದ್ದ ಎಂಬುದರ ಕುರಿತು ತಿಳಿದು ಬರಬೇಕಿದೆ. ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಆರನೇ ಆರೋಪಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *