ಸ್ಯಾಂಡಲ್‍ವುಡ್ ಕ್ವೀನ್‍ಗೂ ತಪ್ತಿಲ್ಲ ಹ್ಯಾಕರ್ಸ್ ಕಾಟ- ಇನ್‍ಸ್ಟಾ ಅಕೌಂಟ್ ಹ್ಯಾಕ್?

ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ಅವರ ಇನ್‍ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಸ್ವತಃ ರಮ್ಯಾ ಅವರೇ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

ನಾನು ಯಾವುದೇ ವಿಡಿಯೋ ಪೋಸ್ಟ್ ಮಾಡಿದರೂ ಆ ಪೋಸ್ಟ್ ಶೋ ಆಗುತ್ತಿಲ್ಲ. ನನ್ನ ಪೋಸ್ಟ್ ನಿಮಗೆ ಕಾಣಿಸುತ್ತಿದ್ಯಾ ಎಂದು ಅಭಿಮಾನಿಗಳಿಗೆ ರಮ್ಯಾ ಪ್ರಶ್ನೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಸಾಮಾಜಿಕ ಜಾಲತಾಣಗಳು ಹಾಗೂ ರಾಜಕೀಯ ಚಟುವಟಿಕೆಗಳಿಂದ ರಮ್ಯಾ ದೂರವೇ ಉಳಿದಿದ್ದರು. ಇತ್ತೀಚೆಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಅವರು, ಪ್ರಚಲಿತ ಬೆಳವಣಿಗೆಗಳು ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಅಲ್ಲದೇ ಅಭಿಮಾನಿಗಳೊಂದಿಗೆ ತಮ್ಮ ಫೋಟೋ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದರು.

ಸಾಮಾನ್ಯವಾಗಿ ಸಿನಿಮಾ ನಟ,ನಟಿಯರು ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಆದರೆ ಇಂತಹ ಖಾತೆಗಳ ಮೇಲೆ ಕಿಡಿಗೇಡಿಗಳು ಕಣ್ಣು ಹಾಕಿ ಹ್ಯಾಕ್ ಮಾಡುತ್ತಾರೆ. ಇದೀಗ ರಮ್ಯಾ ಅವರ ಖಾತೆಯಲ್ಲಿ ದೋಷ ಕಾಣಿಸಿಕೊಂಡಿದ್ದು, ಅಕೌಂಟ್ ಹ್ಯಾಕ್ ಮಾಡಲಾಗಿದೆಯಾ ಎಂಬ ಅನುಮಾನ ಮೂಡಿದೆ. ಕೆಲ ದಿನಗಳ ಹಿಂದೆ ನಟಿ ರಾಧಿಕಾ ಪಂಡಿತ್ ಮತ್ತು ರಶ್ಮಿಕಾ ಅವರ ಪೋಸ್ಟ್ ಗಳಿಗೆ ರಮ್ಯಾ ಕಮೆಂಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದನ್ನೂ ಓದಿ: ಕೈ ಬಂಡಾಯದ ಮಧ್ಯೆ ರಾಹುಲ್ ಬೆನ್ನಿಗೆ ನಿಂತ ರಮ್ಯಾ

Comments

Leave a Reply

Your email address will not be published. Required fields are marked *