ಸ್ಯಾಂಡಲ್‍ವುಡ್‍ಗಿಂದು ಕಾದಿದೆ ಡಬಲ್ ಶಾಕ್

ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ಗೆ ಡಬಲ್ ಶಾಕ್ ಸಿಗಲಿದೆ. ಪತ್ರಕರ್ತ ಇಂದ್ರಜಿತ್ ಲಂಕೇಶ್ ರಿಂದ ಮತ್ತಷ್ಟು ಸ್ಟೋಟಕ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದ್ದರೆ, ಇತ್ತ ಪ್ರಶಾಂತ್ ಸಂಬರಗಿ ರಿಲೀಸ್ ಮಾಡುವ ಹೊಸ ಲಿಸ್ಟ್ ನಲ್ಲಿ ಯಾರ ಹೆಸರಿದೆ ಎಂಬ ಕುತೂಹಲ ಹುಟ್ಟಿದೆ.

ಹೌದು. ಇಂದು ಬೆಳಗ್ಗೆ 11 ಗಂಟೆಗೆ ಇಂದ್ರಜಿತ್ ಅವರು ಸಿಸಿಬಿ ಪೊಲೀಸರ ಮುಂದೆ ಡ್ರಗ್ಸ್ ದಂಧೆಯ ಕರಾಳ ಮುಖವನ್ನು ಬಿಚ್ಚಿಡಲಿದ್ದಾರೆ. ಮೊದಲ ಲಿಸ್ಟ್ ನಲ್ಲಿ ಸ್ಯಾಂಡಲ್‍ವುಡ್‍ನ 15 ನಟ- ನಟಿಯರ ಹೆಸರು ಹೇಳಿದ್ದರು. ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರಿಂದ ಇಬ್ಬರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ನಟಿ ರಾಗಿಣೆಗೆ ಕೂಡ ವಿಚಾರಣೆ ಬರುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದು ಇನ್ನೂ ಪ್ರಾರಂಭವಷ್ಟೇ, ಇಂದಿನ ವಿಚಾರಣೆಯಲ್ಲಿ ಮತ್ತಷ್ಟು ಜನ ಸೆಲೆಬ್ರಿಟಿಗಳ ಹೆಸರು ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

ಇಂದು ಇಂದ್ರಜಿತ್ ಅವರು ಟೆಕ್ನಿಕಲ್ ಎವಿಡೆನ್ಸ್, ವಾಟ್ಸಾಪ್ ಮೆಸೇಜ್ ಗಳು, ಕೆಲ ಫೋಟೋಸ್ ಸಮೇತ ಹಾಜರಾಗಲಿದ್ದಾರೆ. ಇಂದಿನ ಇಂದ್ರಜಿತ್ ಲಂಕೇಶ್ ಹೇಳಿಕೆಯ ಮೇಲೆ ಇಡೀ ಸ್ಯಾಂಡಲ್ ವುಡ್ ದೃಷ್ಟಿ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಮಾಫಿಯಾದ ಕತ್ತಲ ಲೋಕದ ರಹಸ್ಯಗಳು ಇಂದು 11 ಗಂಟೆಗೆ ಬಯಲಾಗುವ ಸಾಧ್ಯತೆಗಳಿವೆ.

ಇತ್ತ ಗಂಧದ ಗುಡಿ ಡ್ರಗ್ಸ್ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10:30ಕ್ಕೆ ಪ್ರಶಾಂತ್ ಸಂಬರಗಿ ಕೂಡ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇವರು ಕೂಡ ನಶೆಯ ನಂಟಿನ ಸುಳಿಯಲ್ಲಿ ಸಿಕ್ಕ ಸೆಲೆಬ್ರಿಟಿಗಳ ಬಣ್ಣ ಬಯಲು ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಸ್ಯಾಂಡಲ್ ವುಡ್ ನಟ ಬಾಂಬೆ ಅಳಿಯ ಯಾರು ಎಂಬ ವಿಚಾರವನ್ನು ಬಟಾಬಯಲು ಮಾಡುತ್ತಾರಾ?, ಅಲ್ಲದೆ ತಮ್ಮ ವಿರುದ್ಧ ತಿರುಗಿ ಬಿದ್ದವರಿಗೆ ರೈಟ್-ಲೆಫ್ಟ್ ತಗೋಳ್ತಾರಾ?, ವಾಣಿಜ್ಯ ಮಂಡಳಿ ಸದಸ್ಯರು ಮಾಡುವ ಆರೋಪಕ್ಕೆ ತಿರುಗೇಟು ನೀಡ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಪ್ರಸಾಂತ್ ಸಂಬರಗಿ ಪಾರ್ಟ್ 2 ಲಿಸ್ಟ್ ನಲ್ಲಿ ಬಹಿರಂಗಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ.

Comments

Leave a Reply

Your email address will not be published. Required fields are marked *