ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಆಪ್ತ ಗೆಳೆಯ ಸಿದ್ಧಾರ್ಥ್ ಪಿಠಾಣಿ

-ರಿಯಾ ಖರ್ಚುಗಳಿಂದ ಚಿಂತೆಗೀಡಾಗಿದ್ದ ಸುಶಾಂತ್
-ಬಣ್ಣದ ಲೋಕಕ್ಕೆ ಬೈ ಹೇಳಲು ನಿರ್ಧರಿಸಿದ್ದ ನಟ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತ ಸ್ಫೋಟಕ ವಿಷಯಗಳನ್ನು ಆಪ್ತ ಗೆಳೆಯ ಸಿದ್ಧಾರ್ಥ್ ಪಿಠಾಣಿ ಹಂಚಿಕೊಂಡಿದ್ದಾರೆ. ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಸಿದ್ಧಾರ್ಥ್ ಹಲವು ಮಾಹಿತಿ ರಿವೀಲ್ ಮಾಡಿದ್ದಾರೆ.

ಸಿದ್ಧಾರ್ಥ್ ಹೇಳಿದ್ದೇನು?
ನಾನು ಸುಶಾಂತ್ ಕೆಲಸಗಳನ್ನು ಮಾಡುತ್ತಿದ್ದೆ, ಆದ್ರೆ ಸಂಬಳ ನೀಡುತ್ತಿರಲಿಲ್ಲ. ಕೊನೆಗೆ ನಾನು ಬೇರೆ ಕಡೆ ಕೆಲಸ ಮಾಡಲು ಆರಂಭಿಸಿದಾಗ ಫೋನ್ ಮಾಡಿದ್ದ ಸುಶಾಂತ್ ಅಲ್ಲಿ ನೀಡುವ ಸಂಬಳ ನೀಡುತ್ತೇನೆ ಎಂದು ನನ್ನನ್ನು ಜನವರಿಯಲ್ಲಿ ಕರೆಸಿಕೊಂಡಿದ್ದರು. ಸುಶಾಂತ್ ಫ್ಲ್ಯಾಟ್ ನಲ್ಲಿ ಉಳಿದುಕೊಳ್ಳಲು ಆರಂಭಿಸಿದೆ. ಆಗ ನಟನೆ ಮಾಡೋದನ್ನು ನಿಲ್ಲಿಸಬೇಕೆಂಬ ತೀರ್ಮಾನಕ್ಕೆ ಬರಲು ಚಿಂತಿಸುತ್ತಿದ್ದೇನೆ. ಮುಂದೆ ನನಗೆ ಯಾರೂ ಕೆಲಸ ನೀಡುವ ಹಾಗೆ ಕಾಣಿಸುತ್ತಿಲ್ಲ ಎಂದು ಸುಶಾಂತ್ ಹೇಳಿದ್ದರು.

ಈ ನಿರ್ಧಾರ ಯಾಕೆ ಎಂದು ಪ್ರಶ್ನಿಸಿದಾಗ ಸುಶಾಂತ್ ಉತ್ತರ ನೀಡಲಿಲ್ಲ. ಸುಶಾಂತ್ ಕೆಲ ದಿನಗಳಿಂದ ಹೆಚ್ಚಾಗುತ್ತಿರುವ ಖರ್ಚುಗಳಿಂದ ಚಿಂತೆಗೀಡಾಗಿದ್ದರು. ಖರ್ಚು ಕಡಿಮೆ ಮಾಡಲು ನಾನು ಸಿಬ್ಬಂದಿ ಜೊತೆ ಮಾತನಾಡಿದಾಗ ರಿಯಾ ಮನೆಗೆ ದುಬಾರಿ ವಸ್ತುಗಳನ್ನು ಖರೀದಿಸುತ್ತಿದ್ದು, ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಸಿದರು. ಈ ಬಗ್ಗೆ ಪ್ರಶ್ನಿಸಿದಾಗ ರಿಯಾ ಕುಟುಂಬದಲ್ಲಿ ಒಬ್ಬಳು. ನೀನು ರಿಯಾ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದರು ಎಂದು ಸಿದ್ಧಾರ್ಥ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸುಶಾಂತ್ ಜೊತೆಯಲ್ಲಿದ್ದ ರಿಯಾ ನಿಧನಕ್ಕೂ ಕೆಲ ದಿನಗಳ ಹಿಂದೆ ಸ್ವಂತ ಮನೆಗೆ ತೆರಳಿದ್ದರು. ಸದ್ಯ ಪ್ರಕರಣವನ್ನು ಮುಂಬೈ ಮತ್ತು ಪಾಟ್ನಾ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *