ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕೊರೊನಾ ಸೋಂಕು ದೃಢ

– ಮಾಸ್ಕ್ ಧರಿಸದೆ ವಿವಾಹದಲ್ಲಿ ಭಾಗವಹಿಸಿದ್ದ ಕಾಗೇರಿ

ಕಾರವಾರ: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಶಿರಸಿಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾಗಿದ್ದರೂ ಯಾವುದೇ ರೀತಿಯ ಲಕ್ಷಣಗಳು ಇಲ್ಲ ಹಾಗೂ ಆರೋಗ್ಯವಾಗಿದ್ದಾರೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ  ತಿಳಿಸಿದ್ದಾರೆ.

ಸಧ್ಯ ಕಾಗೇರಿಯವರು ಹೋಮ್ ಐಸೋಲೇಶನ್‍ನಲ್ಲಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಾಗಿಲ್ಲ. ಇತ್ತೀಚಿಗೆ ಸಭಾಧ್ಯಕ್ಷರ ಸಂಪರ್ಕಕ್ಕೆ ಬಂದವರು ಸ್ವಯಂ ಪ್ರೇರಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಪೀಕರ್ ಕಾಗೇರಿ ಅವರು ಕಳೆದ ಎರಡು ದಿನದ ಹಿಂದೆಯಷ್ಟೇ ಸಿದ್ಧಾಪುರದ ಮನಮನೆಯಲ್ಲಿನ ಮದುವೆ ಮನೆಗೆ ಮಾಸ್ಕ್ ಇಲ್ಲದೇ ಹೋಗಿ ಕ್ಷೇತ್ರದ ಜನರಿಂದಲೇ ಟ್ರೋಲ್ ಗೆ ಒಳಗಾಗಿ ಸುದ್ದಿಯಾಗಿದ್ದರು. ಇದೀಗ ಕೊರೊನಾ ಪಾಸಿಟಿವ್ ವರದಿಯಾಗಿದೆ.

Comments

Leave a Reply

Your email address will not be published. Required fields are marked *