ಸ್ಪಾ ಒಳಗೆ ನುಗ್ಗಿದ್ದ ಪೊಲೀಸರಿಗೆ ಕಂಡಿದ್ದು ಸೆಕ್ಸ್ ದಂಧೆ

– 7 ಯುವತಿಯರು ಸೇರಿದಂತೆ 18 ಜನ ಅರೆಸ್ಟ್,
– ನಗದು, ಚಿನ್ನ, ಕಾಂಡೋಮ್, ವಯಾಗ್ರ ಮಾತ್ರೆ ವಶಕ್ಕೆ

ಲಕ್ನೊ: ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 7 ಯುವತಿಯರು ಸೇರಿದಂತೆ 18 ಜನರನ್ನ ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ ಕಾರ್ಯಚರಣೆ ನಡೆಸಿದ್ದ ಗ್ರೇಟರ್ ನೋಯ್ಡಾದ ಕೋತವಾಲಿಯ ಬೀಟಾ-2 ಪೊಲೀಸರು 18 ಜನರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರೇಟರ್ ನೋಯ್ಡಾದ ಜಗತ್ ಫಾರಂನೊಳಗೆ ಸ್ಪಾ ಹೆಸರಿನಲ್ಲಿ ಅನೈತಿಕ ಚುಟವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರುಗಳ ಬಂದ ಹಿನ್ನೆಲೆ ಡಿಸಿಪಿ ರಾಜೇಶ್ ಕುಮಾರ್ ಸಿಂಗ್ ಸ್ಪಾ ಮೇಲೆ ದಾಳಿ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಆದೇಶಿಸಿದ್ದರು. ಇದನ್ನೂ ಓದಿ: ಗ್ರಾಹಕನಾಗಿ ಸ್ಪಾಗೆ ಹೋದ ಪೊಲೀಸ್ – ಬಯಲಾಯ್ತು ಸೆಕ್ಸ್ ದಂಧೆಯ ಕರಾಳ ಮುಖ

ಡಿಸಿಪಿ ಆದೇಶದ ಮೇರೆಗೆ ಸ್ಟಾ ಸೆಂಟರ್ ಮೇಲೆ ದಾಳಿ ನಡೆಸಿದ್ದ ಎಸ್‍ಹೆಚ್‍ಓ ಸುಜಿತ್ ಉಪಾದ್ಯಯ್ ನೇತೃತ್ವದ ತಂಡ ಸೆಕ್ಸ್ ನಲ್ಲಿ ತೊಡಗಿದ್ದ ಜೋಡಿಗಳನ್ನ ಹಿಡಿದಿದೆ. ದಾಳಿ ನಡೆಯುತ್ತಿದ್ದಂತೆ ಬೆಚ್ಚಿದ ಯುವಕ-ಯುವತಿಯರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ಪೊಲೀಸರು ಎಲ್ಲರನ್ನ ಬಲೆಯಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ:ಹೈ ಪ್ರೊಫೈಲ್ ಸೆಕ್ಸ್ ದಂಧೆ – ಒಬ್ಬಳು ಅರೆಸ್ಟ್, ಮೂವರು ನಟಿಮಣಿಯರ ರಕ್ಷಣೆ

ಸ್ಪಾ ಅಡ್ಡದಲ್ಲಿ 18 ಮೊಬೈಲ್, 1,14,019 ರೂ. ನಗದು, 2 ಡಿವಿಆರ್, ಗ್ರಾಹಕರ ರಿಜಿಸ್ಟರ್ ಬುಕ್, ಕಾಂಡೋಮ್ ಮತ್ತು ಕೆಲ ವಯಾಗ್ರ ಮಾತ್ರೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ‘ನಾನು ದಂಧೆ ಮಾಡೋಳು ಏನ್ ಮಾಡ್ಕೋತ್ತೀರಿ’- ಆಂಟಿಯ ಹೈಟೆಕ್ ಸೆಕ್ಸ್ ದಂಧೆ

Comments

Leave a Reply

Your email address will not be published. Required fields are marked *