ಸ್ಟೇಜ್ ಮೇಲೆ ಹೆಜ್ಜೆ ಹಾಕಿ ನೋಡಿ: ಕಲ್ಲೆಸದವರಿಗೆ ಸಪ್ನಾ ಚೌಧರಿ ಸವಾಲ್

-ಕಿಡಿಗೇಡಿಗಳ ಕಿತಾಪತಿಗೆ ಕಣ್ಣೀರಿಟ್ಟ ಡ್ಯಾನ್ಸಿಂಗ್ ಕ್ವೀನ್

ನವದೆಹಲಿ: ಸ್ಟೇಜ್ ಮೇಲೆ ಬಂದು ಹೆಜ್ಜೆ ಹಾಕಿ ಸೊಂಟ ಬಳುಕಿಸಿ ನೋಡಿ ನಮ್ಮ ಕಷ್ಟ ನಿಮಗೆ ಗೊತ್ತಾಗುತ್ತೆ ಎಂದು ದೇಸಿ ಡ್ಯಾನ್ಸಿಂಗ್ ಕ್ವೀನ್ ಸವಾಲು ಹಾಕಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಕೆಲ ಕಿಡಿಗೇಡಿಗಳು ಕಲ್ಲೆಸೆದಾಗ ನೊಂದ ಸಪ್ನಾ ಚೌಧರಿ ಪುಂಡರಿಗೆ ಸವಾಲು ಹಾಕಿ ಕಣ್ಣೀರಿಟ್ಟಿರುವ ಹಳೆಯ ವಿಡಿಯೋ ವೈರಲ್ ಆಗಿದೆ.

ಹರ್ಯಾಣದ ಡ್ಯಾನ್ಸರ್ ಸಪ್ನಾ ಚೌಧರಿ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಫೇಮಸ್. ತಮ್ಮ ದೇಶಿ ಡ್ಯಾನ್ಸಿಂಗ್ ಶೈಲಿ ಮೂಲಕವೇ ಸಪ್ನಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಅಮೋಘ ಡ್ಯಾನ್ಸ್ ಮೂಲಕ ಸಪ್ನಾ ನೋಡುಗರಿಗೆ ಕಿಕ್ ಏರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಪ್ನಾರ ಡ್ಯಾನ್ಸ್ ವಿಡಿಯೋ ಕ್ಲಿಪ್ ಗಳು ವೈರಲ್ ಆಗುತ್ತಿರುತ್ತವೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಪ್ನಾ ಚೌಧರಿ ಡ್ಯಾನ್ಸ್ ಮಾಡ್ತಿರೋವಾಗ ಕೆಲ ಪುಂಡರು ಕಲ್ಲು ಎಸೆದಿದ್ದಾರೆ. ಇದರಿಂದ ಬೇಸರಗೊಂಡ ಸಪ್ನಾ ಡ್ಯಾನ್ಸ್ ನಿಲ್ಲಿಸಿ ಮೈಕ್ ಹಿಡಿದು ಮಾತನಾಡಿದ್ದಾರೆ. ನೀವುಗಳು ಕಲ್ಲು ಎಸೆದಾಗ ನನಗೆ ಅಳು ಬರುತ್ತದೆ. ನೀವೇ ಸ್ಟೇಜ್ ಮೇಲೆ ಬಂದು ಒಂದೆರಡು ಹೆಜ್ಜೆ ಹಾಕಿ, ಸೊಂಟ ಬಳುಕಿಸಿ ನೋಡಿ ನಿಮ್ಮ ಸ್ಥಿತಿ ಹೇಗಿರುತ್ತೆ ಅಂತ ಗೊತ್ತಾಗುತ್ತದೆ. ಚೆನ್ನಾಗಿ ನಡೆಯುತ್ತಿರೋ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ರೆ ನಿಮಗೆ ಏನು ಸಿಗುತ್ತದೆ ಎಂದು ಪ್ರಶ್ನ ಮಾಡಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸಪ್ನಾ ಸ್ಪರ್ಧಿಸಿದ್ದರು. ಬಿಗ್‍ಬಾಸ್ ಟ್ರೋಫಿ ಗೆಲ್ಲದಿದ್ದರೂ ಇರುವಷ್ಟು ದಿನ ನೋಡುಗರನ್ನು ಮನರಂಜಿಸಿದ್ದರು.

Comments

Leave a Reply

Your email address will not be published. Required fields are marked *