ಸೋಮಣ್ಣ ಪ್ರತಿಷ್ಠಾನದಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡ 512ನೇ ಜಯಂತಿ ಪ್ರಯುಕ್ತ, ಚಲನಚಿತ್ರ ಕಲಾವಿದರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಸೋಮಣ್ಣ ಪ್ರತಿಷ್ಠಾನ ವತಿಯಿಂದ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಗೋವಿಂದರಾಜನಗರ ವಾರ್ಡ್ ಪಾಲಿಕೆ ಸೌಧ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮಣ್ಣ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಚಿಂತನೆಯಿಂದ ಬೆಂಗಳೂರು ನಗರ ನಿರ್ಮಾಣ ಮಾಡಿದರು. ಜಾತ್ಯಾತೀತ ನಿಲುವು ಹೊಂದಿದ್ದು, ಎಲ್ಲ ಕಾಯಕ ಸಮಾಜಗಳಾದ ನೇಕಾರ, ಮಂಡಿ ವ್ಯಾಪಾರಿ, ಕುಂಬಾರಿಕೆ ವಿವಿಧ ಕುಶಲಕರ್ಮಿ ಕೆಲಸಗಾರರಿಗೆ ಪೇಟೆಗಳ ನಿರ್ಮಾಣ ಮಾಡಿ, ಉದ್ಯಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು. ಕಾಯಕಯೋಗಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ನಿಲುವಿನ ಪ್ರತಿಪಾದಕರು ಎಂದರು.

ನಿವೇಶನ ಇಲ್ಲದಿರುವ ಚಲನಚಿತ್ರ ಕಲಾವಿದರು ಮತ್ತು ರಂಗಭೂಮಿ ಕಲಾವಿದರುಗಳು ಪಟ್ಟಿ ಮಾಡಿ ಅರ್ಜಿ ಕೊಟ್ಟರೆ ಕೂಡಲೇ ಮುಖ್ಯಮಂತ್ರಿಗಳ ಹತ್ತಿರ ಚರ್ಚಿಸಿ ಒಂದೂವರೆ ತಿಂಗಳಲ್ಲಿ ವಸತಿ ಅಥವಾ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ನಂತರ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಮಾತನಾಡಿ, ಬೆಂಗಳೂರು ನಗರ ವಿಶ್ವವಿಖ್ಯಾತಿ ಪಡೆಯಲು ಮೂಲ ಕಾರಣ ನಾಡಪ್ರಭು ಕೆಂಪೇಗೌಡರು. ಅವರ ಅಭಿವೃದ್ಧಿ ಪರ ಚಿಂತನೆ, ಯೋಜನೆಗಳು ಜಾರಿಗೆ ಬಂದರೆ ಬೆಂಗಳೂರು ನಗರ ಇನ್ನಷ್ಟು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಿಂದ ಮುಕ್ತರಾದ್ರೆ ಸಚಿವರಾಗ್ತಾರೆ: ಜೆ.ಸಿ.ಮಾಧುಸ್ವಾಮಿ

Comments

Leave a Reply

Your email address will not be published. Required fields are marked *