ಸೋನಾಲಿ ಧಮ್ಕಿಗೆ ಕೆಂಡವಾದ ಸಲ್ಮಾನ್ ಖಾನ್

ಮುಂಬೈ: ಬಿಗ್‍ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳಿಗೆ ಧಮ್ಕಿ ಹಾಕಿದ ಸೋನಾಲಿ ಪೋಗಟ್ ಮೇಲೆ ಕಾರ್ಯಕ್ರಮದ ನಿರೂಪಕ, ನಟ ಸಲ್ಮಾನ್ ಖಾನ್ ಕೋಪಗೊಂಡು ನಿಮ್ಮಿಂದ ಏನು ಮಾಡಿಕೊಳ್ಳಲು ಸಾಧ್ಯ ಅಂತ ಪ್ರಶ್ನೆ ಮಾಡಿದ್ದಾರೆ.

ಇಂದು ಪ್ರಸಾರವಾಗುವ ಸಂಚಿಕೆಯ ಪ್ರೋಮೋ ವೈರಲ್ ಆಗಿದ್ದು, ಸಲ್ಮಾನ್ ಖಾನ್ ಕೋಪಗೊಂಡಿದ್ದನ್ನ ಕಂಡು ಬಿಗ್ ಮನೆಯ ಸ್ಪರ್ಧಿಗಳು ಆಶ್ಚರ್ಯಚಕಿತರಾಗಿದ್ದಾರೆ. ಪ್ರತಿ ವಾರದಂತೆ ಈ ವಾರ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧೆಗಳಿಗೆ ಪ್ರಶ್ನೆ ಮಾಡುತ್ತಿದ್ದರು. ಈ ವೇಳೆ ಸೋನಾಲಿ ಫೋಗಟ್ ಗೆ ಪ್ರಶ್ನಿಸಿದ ಯುವತಿ, ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಕ್ಕೆ ರುಬಿನಾಗೆ ಧಮ್ಮಿ ಹಾಕ್ತಿದ್ದೀರಾ ಎಂದು ಕೇಳಿದ್ದರು.

ಪ್ರಶ್ನೆಗೆ ಉತ್ತರಿಸಿದ ಸೋನಾಲಿ, ನಾನು ಯಾವುದೇ ಕೆಟ್ಟ ಪದ ಬಳಕೆ ಮಾಡಿಲ್ಲ. ನಮ್ಮಿಬ್ಬರ ಜಗಳದಲ್ಲಿ ರುಬಿನಾ ನನ್ನ ಮಗಳನ್ನ ಎಳೆದು ತಂದಿದ್ದಕ್ಕೆ ಬೈದಿರಬಹುದು. ಆದ್ರೆ ಧಮ್ಕಿ ಹಾಕಿಲ್ಲ. ನಾನು ಧಮ್ಕಿ ಹಾಕಿರುವ ವೀಡಿಯೋಗಳಿದ್ರೆ ನನಗೆ ತೋರಿಸಿ ಅಂತ ಹೇಳಿದ್ದರು. ಮತ್ತೋರ್ವ ಸ್ಪರ್ಧಿ ಸಹ ಹೊರಗೆ ಬನ್ನಿ ನಿಮ್ಮನ್ನ ನೋಡಿಕೊಳ್ಳುತ್ತೇನೆ. ಅಲ್ಲಿ ನಮ್ಮವರು ನಿಮ್ಮನ್ನು ಚೆನ್ನಾಗಿ ವಿಚಾರಿಸಿಕೊಳ್ತಾರೆ ಎಂದು ಬೆದರಿಕೆ ಹಾಕಿರುವ ಸಲ್ಮಾನ್ ಗೆ ಹೇಳಿದರು.

https://twitter.com/NidhiShah0000/status/1350157391719931904

ಸಹ ಸ್ಪರ್ಧಿಗಳ ದೂರು ಕೇಳಿ ಕೆಂಡವಾದ ಸಲ್ಮಾನ್, ಜಗಳದಲ್ಲಿ ರುಬಿನಾ ನಿಮ್ಮ ಮಗಳ ಬಗ್ಗೆಯೇ ಮಾತನಾಡಿಲ್ಲ. ಹೊರಗೆ ಬಂದ್ರೆ ನೀವೇನು ಮಾಡಿಕೊಳ್ಳಲು ಸಾಧ್ಯ ಎಂದು ಆಕ್ರೋಶ ಹೊರ ಹಾಕಿದರು. ಸದ್ಯ ಪ್ರೋಮೋ ವೈರಲ್ ಆಗಿದ್ದು, ಇಂದಿನ ಸಂಚಿಕೆ ನೋಡಲು ವೀಕ್ಷಕರು ಕಾತುರರಾಗಿದ್ದಾರೆ.

Comments

Leave a Reply

Your email address will not be published. Required fields are marked *