ತಮ್ಮನನ್ನ ತೊಡೆ ಮೇಲೆ ಮಲಗಿಸ್ಕೊಂಡು ಲಾಲಿ ಹಾಡಿದ ಐರಾ- ವಿಡಿಯೋ ವೈರಲ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ರಾಧಿಕಾ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಐರಾ ತನ್ನ ಮುದ್ದ ಸಹೋದರನನ್ನು ತೊಡೆ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಿರುವ ವಿಡಿಯೋವನ್ನು ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ನಟಿ ರಾಧಿಕಾ ಇನ್‍ಸ್ಟಾಗ್ರಾಂ, ಫೇಸ್‍ಬುಕ್‍ನಲ್ಲಿ ಐರಾ ತನ್ನ ಸಹೋದರನಿಗೆ ಲಾಲಿ ಹಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಆ ವಿಡಿಯೋಗೆ ” ನನ್ನ ಮಗಳು ಐರಾಗೆ ಇಂದಿಗೆ 18 ತಿಂಗಳು ತುಂಬಿದೆ. ಅಲ್ಲದೇ ಐರಾ ತನ್ನ ತಂದೆಯನ್ನು ಅನುಕರಿಸುತ್ತಾಳೆ ಎಂಬುದು ನನಗೆ ಖಚಿತವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಐರಾ ತನ್ನ ಸಹೋದರನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಗಿ ಲಾಲಿ ಹಾಡಿ, ತಟ್ಟಿ ಮಲಗಿಸುವ ಪ್ರಯತ್ನ ಮಾಡಿದ್ದಾಳೆ. ಅಲ್ಲದೇ ತನ್ನ ತಮ್ಮನ್ನು ಅಪ್ಪಿಕೊಂಡು ಮುದ್ದಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ರಾಧಿಕಾ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇದುವರೆಗೂ 1.60 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ನೋಡಿದ್ದಾರೆ.

ಇತ್ತೀಚೆಗಷ್ಟೆ ನಟಿ ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಪತಿ ಯಶ್ ಮತ್ತು ಮಗನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅದಕ್ಕೆ ‘My Favourite Boys’ (ನನ್ನ ನೆಚ್ಚಿನ ಹುಡುಗರು) ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಫೋಟೋದಲ್ಲಿ ಯಶ್ ತಮ್ಮ ಮುದ್ದು ಮಗನನ್ನು ಎತ್ತಿಕೊಂಡಿದ್ದು, ಅವನ ಮುಖವನ್ನೇ ನೋಡುತ್ತಾ ಸಂತಸಪಟ್ಟಿದ್ದಾರೆ. ಇನ್ನೂ ಜೂನಿಯರ್ ಯಶ್ ಕೂಡ ನಗುತ್ತಾ ಕ್ಯೂಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾನೆ.

 

Comments

Leave a Reply

Your email address will not be published. Required fields are marked *