ಸೋಂಕಿನಿಂದ ಪೋಷಕರ ಕಳೆದುಕೊಂಡ ಮಗುವಿನ ಮನೆಗೆ ಶಶಿಕಲಾ ಜೊಲ್ಲೆ ಭೇಟಿ

ಚಾಮರಾಜನಗರ: ಕೊರೊನಾದಿಂದ ತಂದೆ,ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ 5 ವರ್ಷದ ಹೆಣ್ಣು ಮಗುವಿನ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇದನ್ನೂ ಓದಿ: ದೂದ್ ಗಂಗಾ ಯೋಜನೆ -ಬಿಎಸ್‍ವೈ ಮಹತ್ವದ ಚರ್ಚೆ

ಇಂದು ಚಾಮರಾಜನಗರ ತಾಲೂಕಿನ ಕೊತ್ತಲವಾಡಿಗೆ ಭೇಟಿ ನೀಡಿದ್ದ ಅವರು ಬಾಲಸೇವಾ ಯೋಜನೆಯಡಿ ಮಗುವಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಮಗುವಿನ ಖಾತೆಗೆ ಪ್ರತಿ ತಿಂಗಳು 3500 ರೂಪಾಯಿಗಳನ್ನು ಹಾಕಲಾಗುತ್ತದೆ. ಉಚಿತ ಶಿಕ್ಷಣ, ಎಸ್‍ಎಸ್‍ಎಲ್‍ಸಿ ಆದ ಮೇಲೆ ಉನ್ನತ ಶಿಕ್ಷಣಕ್ಕೆ ಉಚಿತ ಲ್ಯಾಪ್‍ಟಾಪ್, 21 ವರ್ಷ ತುಂಬಿದ ಮೇಲೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ಓಟಗಾರ ಮಿಲ್ಕಾ ಸಿಂಗ್ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ

ಈ ವೇಳೆ ಸಚಿವೆಯ ಮುಂದೆ ದೊಡ್ಡ ವಳಾದ ಮೇಲೆ ಡಿಸಿ ಆಗಬೇಕೆಂದು 5 ವರ್ಷದ ಮಗು ತನ್ನ ಕನಸು ಬಿಚ್ಚಿಟ್ಟಿದ್ದಾಳೆ. ಮಗುವನ್ನು ಸಂತೈಸುವ ಸಂದರ್ಭದಲ್ಲಿ ದೊಡ್ಡವಳಾದ ಮೇಲೆ ಏನಾಗಬೇಕೆಂದು ಸಚಿವೆ ಕೇಳಿದರು. ಡಿಸಿ ಆಗಬೇಕೆಂದು ಮುಗ್ದತೆಯಿಂದ ತನ್ನ ಮನದಾಸೆಯನ್ನು ತಬ್ಬಲಿ ಮಗು ಹೇಳಿಕೊಂಡಿತು. ಮಗುವಿನ ಕನಸು ಈಡೇರಿಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: 2000 ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪ, ತನಿಖೆ ಯಾಕಿಲ್ಲ? ಸರ್ಕಾರಕ್ಕೆ ಹೆಚ್‍ಡಿಕೆ ಪ್ರಶ್ನೆ

Comments

Leave a Reply

Your email address will not be published. Required fields are marked *