ಸೋಂಕಿತರ ರಂಜನೆಗಾಗಿ ರಸಮಂಜರಿ-ಹಾಡಿಗೆ ತಲೆದೂಗಿದ ಸೋಂಕಿತರು

ತುಮಕೂರು: ಕೋವಿಡ್ ಕೇರ್ ಸೆಂಟರಲ್ಲಿ ಸೋಂಕಿತರ ರಂಜನೆಗಾಗಿ ರಸಮಂಜರಿ ನಡೆಸಲಾಗಿದೆ. ಮಧುಗಿರಿ ತಾಲೂಕಿನ ಬಡವನಹಳ್ಳಿ ಕೇಂದ್ರದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ರಿಯಾಲಿಟಿ ಶೋ ಗಾಯಕ ಕಂಬದ ರಂಗಯ್ಯ ಗೊಂಬೆ ಹೇಳತೈತೆ ಹಾಡು ಸೇರಿದಂತೆ ಹಲವು ಹಾಡು ಹಾಡಿ ಸೋಂಕಿತರಿಗೆ ರಂಜಿಸಿದ್ದಾರೆ. ಅದೇ ರೀತಿ ಮಧುಗಿರಿ ಎಸಿ ಸೋಮಪ್ಪ ಕೂಡ ಹಳೆ ಸಿನೆಮಾ ಹಾಡನ್ನು ಹಾಡಿ ತಲೆದೂಗುವಂತೆ ಮಾಡಿದ್ದಾರೆ.

ಕೋವಿಡ್ ಕೇರ್ ಸೆಂಟರಲ್ಲಿ 80 ಕ್ಕೂ ಹೆಚ್ಚು ಸೋಂಕಿತರಿದ್ದು ಎಲ್ಲರ ಮಾನಸಿಕ ಆರೋಗ್ಯ ವೃದ್ದಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧುಗಿರಿ ತಾಲೂಕಿನಲ್ಲಿ 04 ಕೋವಿಡ್ ಕೇರ್ ಸೆಂಟರ್ ಇದ್ದು ತಾಲೂಕು ಆಡಳಿತ ಸೋಂಕಿತರ ಮಾನಸಿಕ ಆರೋಗ್ಯ ವೃದ್ಧಿಗಾಗಿ ಈ ರೀತಿಯ ಕಾರ್ಯ ಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಭಾರತದಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,20,529 ಕೇಸ್ ದಾಖಲಾಗಿವೆ. ಅಲ್ಲದೆ, 3,380 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3,44,082ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,55,248ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 1,97,894 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,67,95,549ಕ್ಕೆ ತಲುಪಿದೆ.

Comments

Leave a Reply

Your email address will not be published. Required fields are marked *