ಸೋಂಕಿತರಿಗೆ ಹಾಡಿನ ಮೂಲಕ ಆತ್ಮವಿಶ್ವಾಸ ತುಂಬಿದ ಜನಪದ ಕಲಾವಿದರು

ಕೊಪ್ಪಳ: ಕೊರೊನಾ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಮನರಂಜನೆ ಮೂಲಕ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಜನಪದ ಕಲಾವಿದರಿಂದ ಹಾಡಿನ ಕಾರ್ಯಕ್ರಮವನ್ನು ಆಯೋಸಿಸಲಾಗಿತ್ತು.

ಮಹಾಮಾರಿ ಕೊರೊನಾ ಹಿನ್ನಲೆಯಲ್ಲಿ, ಸೋಂಕಿತರನ್ನು ಕೊರೊನಾ ಕೇರ್ ಸೆಂಟರಿನಲ್ಲಿರಿಸಿ ಅವರಿಗೆ ಆರೈಕೆ ಮಾಡಲಾಗುತ್ತಿದೆ. ಕೊರೊನಾ ಸೋಂಕಿನಿಂದಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಕುಗ್ಗಿ ಹೋಗುತ್ತಿದ್ದಾರೆ. ಹೀಗಾಗಿ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಿಸುವ ಕಾರ್ಯವನ್ನು ಕೊಪ್ಪಳದ ಕುಷ್ಟಗಿಯಲ್ಲಿಯ ಕೊರೊನಾ ಕೇರ್  ಸೆಂಟರ್‌ನಲ್ಲಿ ಜನಪದ ಕಲಾವಿದರಿಂದ ಹಾಡಿನ ಕಾರ್ಯಕ್ರಮ ನಡೆಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

ಕುಷ್ಟಗಿಯವರೇ ಆಗಿರುವ ಆಕಾಶವಾಣಿ, ದೂರದರ್ಶನ ಕಲಾವಿದ ಶರಣಪ್ಪ ವಡಿಗೆರಿ ಅವರು ನಿನ್ನೆ ಸಂಜೆ ಕೊರೊನಾ ಸೆಂಟರ್‍ನಲ್ಲಿ ಜನಪದ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕುಷ್ಟಗಿಯ ಬಿಸಿಎಂ ಹಾಸ್ಟೆಲ್ ನಲ್ಲಿರುವ ಕೊರೊನಾ ಕೇರ್ ಸೆಂಟರ್‌ನಲ್ಲಿ ಒಟ್ಟು 25 ಜನ ಸೋಂಕಿತರಿದ್ದಾರೆ. ಸೋಂಕಿನ ಭಯ, ಒಂದೇ ಕಡೆ ಇರುವ ಸೋಂಕಿತರಿಗೆ ಮನೋಲ್ಲಾಸ ಅವಶ್ಯವಿದೆ, ಕೊರೊನಾ ಸೋಂಕಿನ ಭಯ ನಿವಾರಣೆಗಾಗಿ ಅವರಲ್ಲಿ ಧೈರ್ಯ ಹಾಗು ಆತ್ಮಸ್ಥೈರ್ಯ ಹೆಚ್ಚಿಸಬೇಕಾಗಿದೆ, ಈ ನಿಟ್ಟಿನಲ್ಲಿ ಕಲಾವಿದ ಶರಣಪ್ಪ ವಡಿಗೆರಿ ಹಾಡುಗಳ ಮೂಲಕ ಸೋಂಕಿತರ ಮನಸಿನ ಭಾರ ಇಳಿಸಿದ್ದಾರೆ. ಇದನ್ನೂ ಓದಿ: ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

ಹಲವಾರು ಕಡೆ ಕಾರ್ಯಕ್ರಮ ನೀಡುವ ಶರಣಪ್ಪ ವಡಿಗೆರಿ ಕೊವಿಡ್ ಕೇರ್  ಸೆಂಟರ್‌ನಲ್ಲಿ ತಮ್ಮದೆ ದಾಟಿಯಲ್ಲಿ ವಿಶಿಷ್ಠ ದಾಟಿಯಲ್ಲಿ ಹಾಡಿದರು. ಶರಣಪ್ಪ ಹಾಡಿನಿಂದ ಸೋಂಕಿತರು ಖುಷಿಗೊಂಡು ಒಂದಿಷ್ಟು ಮಾನಸಿಕವಾಗಿ ಉಲ್ಲಾಸಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *