ಸೆಟ್‍ನಲ್ಲಿ ನಟ, ನಿರ್ದೇಶಕರಿಗೆ ನಾವು ಹೆಂಡ್ತೀರ ರೀತಿ ವರ್ತಿಸಬೇಕು: ಕಂಗನಾ

– ನಾವು ಯಶಸ್ವಿ ಆಗಬೇಕಾದ್ರೆ ಅವರನ್ನ ಸಂತೋಷ ಪಡಿಸಬೇಕು

ಮುಂಬೈ: ಬಾಲಿವುಡ್ ಬೆಡಗಿ ನಟಿ ಕಂಗನಾ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಕಂಗನಾ ಕಚೇರಿಯನ್ನು ಭಾಗಶಃ ಧ್ವಂಸ ಮಾಡಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ನನ್ನ ಕನಸಿನ ಮೇಲೆ ನಡೆಸಿದ ಅತ್ಯಾಚಾರವಿದು- ಫೋಟೋ ಶೇರ್ ಮಾಡಿದ ಕಂಗನಾ

ಇತ್ತೀಚೆಗೆ ನಟಿ ಕಂಗನಾ ಸಂದರ್ಶನವೊಂದರಲ್ಲಿ ಬಾಲಿವುಡ್‍ನಲ್ಲಿ ಕಾಸ್ಟಿಂಗ್ ಕೌಚ್ ಮತ್ತು ಮಹಿಳೆಯರ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ್ದಾರೆ. “ನಟಿಯಾದವರು ಸಿನಿಮಾದಲ್ಲಿ ಯಶಸ್ವಿಯಾಗಬೇಕೆಂದರೆ ಅಥವಾ ಗುರುತಿಸಿಕೊಳ್ಳಬೇಕು ಎಂದು ಬಯಸಿದರೆ ಅವರು ನಟ ಅಥವಾ ನಿರ್ದೇಶಕರನ್ನು ಸಂತೋಷಪಡಿಸಬೇಕಾಗುತ್ತದೆ” ಎಂದು ಕಂಗನಾ ಹೇಳಿದ್ದಾರೆ. ಇದನ್ನೂ ಓದಿ: ಕಚೇರಿ ಹಾನಿ: 2 ಕೋಟಿ ರೂ. ಪರಿಹಾರ ಕೇಳಿದ ಕಂಗನಾ

ಅಷ್ಟೇ ಅಲ್ಲದೇ, “ಅನೇಕ ನಟರು, ಸೂಪರ್‌ಸ್ಟಾರ್‌ಗಳು, ಎ ಲಿಸ್ಟ್ ನಟರು, ಬಿಗ್ ಸೂಪರ್‌ಸ್ಟಾರ್‌ಗಳು ಮತ್ತು ನಿರ್ದೇಶಕರು ಚಿತ್ರದ ಸೆಟ್‍ಗಳಲ್ಲಿ ನಟಿಯರನ್ನು ಹೆಂಡತಿಯಂತೆ ನೋಡಲು ಬಯಸುತ್ತಾರೆ. ಆದ್ದರಿಂದ ನಾವು ಅವರ ಪತ್ನಿಯರಂತೆ ಸೆಟ್‍ನಲ್ಲಿ ವರ್ತಿಸಬೇಕು. ಆಗ ಮುಂದಿನ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಇದು ಉದ್ಯಮದ ಸತ್ಯ ಎಂದು ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ಕಳೆದ ಸೆಪ್ಟೆಂಬರ್ 9 ರಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಕಂಗನಾ ಅವರ ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್ ಬಂಗಲೆಯನ್ನು ಅಕ್ರಮ ಕಟ್ಟಡ ಎಂದು ಪರಿಗಣಿಸಿ ತೆರವು ಕಾರ್ಯಾಚರಣೆ ಮಾಡಿತ್ತು. ಬಿಎಂಸಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಕಂಗನಾ ಅವರು, ಬಿಎಂಸಿ ಈಗಾಗಲೇ ಬಂಗಲೆಗೆ ಶೇ.40ರಷ್ಟು ಹಾನಿ ಮಾಡಿದೆ. ಅಲ್ಲದೆ ಬಂಗಲೆಯ ಒಳಗಡೆ ಇದ್ದ ಕೆಲವೊಂದು ಅಪರೂಪದ ಕಲಾತ್ಮಕ ವಸ್ತುಗಳನ್ನು ಕೂಡ ನಾಶಪಡಿಸಿದೆ. ಹೀಗಾಗಿ ಬಿಎಂಸಿ ತನಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮುಂಬೈ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ.

ಇದಾದ ನಂತರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಮ್ಮ ಕಚೇರಿಯನ್ನು ಭಾಗಶಃ ಧ್ವಂಸ ಮಾಡಿದ್ದು, ಸದ್ಯ ಕಚೇರಿಯ ಸ್ಥಿತಿ ಹೇಗಿದೆ ಎಂಬ ಫೋಟೋಗಳನ್ನು ನಟಿ ಕಂಗನಾ ರಣಾವತ್ ಹಂಚಿಕೊಂಡಿದ್ದರು. “ಇದು ನನ್ನ ಕನಸು, ಆತ್ಮಗೌರವ ಹಾಗೂ ಭವಿಷ್ಯದ ಮೇಲೆ ನಡೆಸಿರುವ ಅತ್ಯಾಚಾರ ಎಂದು ಟ್ವೀಟ್ ಮಾಡುವ ಮೂಲಕ ಕಂಗನಾ, ಕಚೇರಿಯ ವಸ್ತುಸ್ಥಿತಿಯನ್ನು ತೆರೆದಿಡುವ ಫೋಟೋಗಳನ್ನು ಹಂಚಿಕೊಂಡಿದ್ದರು.

Comments

Leave a Reply

Your email address will not be published. Required fields are marked *