ಸುಶಾಂತ್ ನಿಧನದಿಂದ ಅರ್ಧಕ್ಕೆ ನಿಂತ ಚಿತ್ರಗಳು

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಆತ್ಮಹತ್ಯೆಗೆ ಶರಣಾದ ಸುಶಾಂತ್ ನಟನೆಯ ಒಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ರೆ ಕೆಲವು ಚಿತ್ರಗಳು ಅರ್ಧಕ್ಕೆ ನಿಂತುಕೊಳ್ಳುವ ಸ್ಥಿತಿ ತಲುಪಿವೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸುಶಾಂತ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುಮಾರು ಸಿನಿಮಾಗಳ ಕಥೆಯನ್ನ ಕೇಳಿದ್ದ ಸುಶಾಂತ್ ಕೆಲವನ್ನು ಒಪ್ಪಿಕೊಂಡಿದ್ದರು. ಒಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಓಟಿಟಿ ಪ್ಲಾಟ್‍ಫಾರಂನಲ್ಲಿ ರಿಲೀಸ್ ಆಗಲಿದೆ ಎಂದು ವರದಿಯಾಗಿದೆ.

1. ದಿಲ್ ಬೇಚಾರಾ: ಇದು ಇಂಗ್ಲಿಷ್‍ನ ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್ ರಿಮೇಕ್ ಆಗಿದೆ. ಮುಕೇಶ್ ಛಾಬ್ರಾ ನಿರ್ದೇಶನದಲ್ಲಿ ಮೂಡಿ ಬಂದಿರುವ ದಿಲ್ ಬೇಚಾರಾದಲ್ಲಿ ಸಂಜನಾ ಸಾಂಧಿ ಬನಟಿಸಿದ್ದಾರೆ.

2. ರೈಫಲ್ ಮ್ಯಾನ್: 2019ರಲ್ಲಿ ಸುಶಾಂತ್ ಸಿಂಗ್ ರೈಫಲ್ ಮ್ಯಾನ್ ಸಿನಿಮಾದಲ್ಲಿ ನಟಿಸುತ್ತಿರೋದಾಗಿ ಹೇಳಿಕೊಂಡಿದ್ದರು. ಚಿತ್ರದ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿತ್ತು. 1962 ಭಾರತ ಮತ್ತು ಚೀನಾದ ಯುದ್ಧದ ಹೀರೋ ರೈಫಲ್ ಮ್ಯಾನ್ ಜಸ್ವಂತ್ ಸಿಂಗ್ ಅವರ ಜೀವನಾಧರಿತ ಕಥೆಯನ್ನು ಸಿನಿಮಾ ಒಳಗೊಂಡಿದೆ.

3. ಎಮರಜೆನ್ಸ್: ಶಿಪ್ ಆಫ್ ಥಿಸಿಯಸ್ ಸಿನಿಮಾ ಖ್ಯಾತಿಯ ಆನಂದ್ ಗಾಂಧಿ ನಿರ್ಮಾಣದಲ್ಲಿ ಚಿತ್ರ ಸೆಟ್ಟೇರಲು ಸಿದ್ಧಗೊಂಡಿತ್ತು. ಮಹಾಮಾರಿಯಿಂದ ಜಗತ್ತನ್ನು ಕಾಪಾಡಲು ನಾಲ್ವರು ವಿಜ್ಞಾನಿಗಳು ಹೇಗೆ ಕೆಲಸ ಮಾಡುತ್ತಾರೆ ಕಥೆಯನ್ನು ಚಿತ್ರ ಹೊಂದಿದೆ. ಮೊದಲಿಗೆ ಇರ್ಫಾನ್ ಖಾನ್ ಅವರನ್ನು ಚಿತ್ರಕ್ಕೆ ಅಪ್ರೋಚ್ ಮಾಡಲಾಗಿತ್ತು. ಇರ್ಫಾನ್ ನಿಧನದಿಂದ ಆ ಜಾಗಕ್ಕೆ ಸುಶಾಂತ್ ಸಿಂಗ್ ರಜಪೂತ್ ಆಯ್ಕೆಯಾಗಿದ್ದರು.

4. ತಕ್‍ದುಮ್: ಹೋಮಿ ದಜಾನಿಯಾ ನಿರ್ದೇಶನದ ಈ ಸಿನಿಮಾದಲ್ಲಿಯೂ ಸುಶಾಂತ್ ನಟಿಸಬೇಕಿತ್ತು. ಚಿತ್ರದಲ್ಲಿ ಸುಶಾಂತ್ ಜೊತೆ ಪರಿಣೀತಿ ಚೋಪ್ರಾ ನಟಿಸಬೇಕಿತ್ತು. ಶುದ್ಧ್ ದೇಸಿ ರೊಮ್ಯಾನ್ಸ್ ಬಳಿಕ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಒಂದಾಗಲು ಎಲ್ಲ ಪ್ಲಾನ್‍ಗಳು ನಡೆದಿದ್ದವು.

https://www.instagram.com/p/CBcKgU9HXq6/

5. ಪಾನಿ ಮತ್ತು ಇತರೆ ಚಿತ್ರಗಳು: ಪಾನಿ ಸಿನಿಮಾಗೆ ಶೇಖರ್ ಕಪೂರ್ ಜೊತೆಯಲ್ಲಿ ಸುಶಾಂತ್ ಕೆಲಸ ಮಾಡುತ್ತಿದ್ದರು. ಚಿತ್ರತಂಡ ಸಿನಿಮಾಗಾಗಿ ಬಹಳಷ್ಟು ಅಧ್ಯಯನ ಮತ್ತು ರಿಹರ್ಸಲ್ ಸಹ ನಡೆಸಿತ್ತು. ಆದ್ರೆ ಯಶ್ ರಾಜ್ ನಿರ್ಮಾಣ ಸಂಸ್ಥೆ ಸಿನಿಮಾಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಕೆಲಸಗಳು ಸ್ಥಗಿತಗೊಂಡಿದ್ದವು. ಇನ್ನು ‘ಚಂದಾ ಮಾಮು ದೂರ್ ಕೇ’ ಹೆಸರಿನ ಅಂತರಿಕ್ಷ ಕಥೆ ಆಧಾರಿತ ಸಿನಿಮಾ ಸಹ ಸುಶಾಂತ್ ಒಪ್ಪಿಕೊಂಡಿದ್ದರು. ಆದ್ರ ಬಜೆಟ್ ಇಲ್ಲದ ಹಿನ್ನೆಲೆಯಲ್ಲಿ ಸಿನಿಮಾ ಸೆಟ್ಟೇರಿರಲಿಲ್ಲ.

https://www.instagram.com/p/CBbLAwLn-Zr/

Comments

Leave a Reply

Your email address will not be published. Required fields are marked *