ಸುಶಾಂತ್ ಕೊಡಗಿನಲ್ಲಿ ಸೆಟಲ್ ಆಗಲು ಪ್ಲಾನ್ ಮಾಡಿದ್ರು: ರಿಯಾ ಚಕ್ರವರ್ತಿ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸ್ವಜನಪಕ್ಷಪಾತದಿಂದ ಬೇಸತ್ತು ಕೊಡಗಿನಲ್ಲಿ ನೆಲಸಲು ಸೆಟಲ್ ಆಗಲು ಪ್ಲಾನ್ ಮಾಡಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಹೇಳಿದ್ದಾರೆ.

ಸುಶಾಂತ್ ನಗರ ಪ್ರದೇಶದಲ್ಲಿ ವಾಸವಾಗುವುದನನ್ನ ಇಷ್ಟಪಡುತ್ತಿರಲಿಲ್ಲ. ಬೆಟ್ಟ, ಗುಡ್ಡ, ಹಸಿರು ವಾತಾವರಣದಲ್ಲಿ ನೆಲಸಲು ನಿರ್ಧರಿಸಿದ್ದರು. ಕೊಡಗು ವ್ಯಾಪ್ತಿಯಲ್ಲಿ ಉಳಿದುಕೊಳ್ಳಲು ಮನೆಯನ್ನ ಸಹ ಸುಶಾಂತ್ ಹುಡುಕುತ್ತಿದ್ದರು. ಲಾಕ್‍ಡೌನ್ ಆಗಿದ್ದರಿಂದ ಈ ಕೆಲಸ ಮುಂದೂಡಲಾಗಿತ್ತು. ಕೊಡಗಿನಲ್ಲಿ ಉಳಿದುಕೊಳ್ಳುವ ಬಗ್ಗೆ ಸಿದ್ಧಾಥ್ ಜೊತೆ ಹಲವು ಬಾರಿ ಚರ್ಚಿಸಿದ್ದೇವೆ ಎಂದಿದ್ದಾರೆ.

ಚಿಚೋರೆ ಅಂತಹ ಒಳ್ಳೆಯ ಸಿನಿಮಾ ಮಾಡಿದ್ರೂ ಸುಶಾಂತ್ ಗೆ ಯಾವುದೇ ಪ್ರಶಸ್ತಿ ಬರುತ್ತಿರಲಿಲ್ಲ. ಅದೇ ಚಿತ್ರದ ಇತರರಿಗೆ ಹಲವು ಪ್ರಶಸ್ತಿಗಳು ಬರುತ್ತಿತ್ತು. ಈ ಎಲ್ಲ ಕಾರಣಗಳಿಂದ ಸುಶಾಂತ್ ಬಣ್ಣದ ಲೋಕದಿಂದ ದೂರ ಉಳಿಯಲು ಚಿಂತಿಸುತ್ತಿದ್ದರು. ಕೊಡಗಿನಲ್ಲಿದ್ರೂ ವರ್ಷಕ್ಕೆ ಒಂದು ಸಿನಿಮಾ ಮಾಡಬಹುದು ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *