ಸುಶಾಂತ್ ಕುತ್ತಿಗೆಗೆ ಸೂಜಿಯಿಂದ ಚುಚ್ಚಲಾಗಿತ್ತು: ಆಸ್ಪತ್ರೆಯ ಸಿಬ್ಬಂದಿ

-ಶವ ಆಸ್ಪತ್ರೆಯಲ್ಲಿದ್ದಾಗ ವೈದ್ಯರು ಕೊಲೆ ಅಂದಿದ್ರು

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಕುತ್ತಿಗೆ ಭಾಗದಲ್ಲಿ ಸೂಜಿಯಿಂದ ಚುಚ್ಚಿದ ರೀತಿಯಲ್ಲಿ ಗಾಯಗಳಿದ್ದವು. ಶವ ಆಸ್ಪತ್ರೆಯಲ್ಲಿದ್ದಗಲೂ ಅಲ್ಲಿಯ ವೈದ್ಯರು ಇದೊಂದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು ಎಂದು ಮುಂಬೈನ ಕೂಪರ್ ಆಸ್ಪತ್ರೆಯ ಸಿಬ್ಬಂದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂದರ್ಶನ ನೀಡಿರುವ ಸಿಬ್ಬಂದಿ ಸುಶಾಂತ್ ಶವ ಆಸ್ಪತ್ರೆಗೆ ತಂದಾಗಿನಿಂದ ಅಂತ್ಯಕ್ರಿಯೆವರೆಗೂ ಸ್ಥಳದಲ್ಲಿದ್ದರು. ಕುತ್ತಿಗೆ ಭಾಗದಲ್ಲಿ ಸೂಜಿಯಿಂದ ಮಾಡಲಾಗಿದ್ದ ಸುಮಾರು 15 ಗಾಯಗಳಾಗಿದ್ದವು. ಆತ್ಮಹತ್ಯೆಗೆ ಶರಣಾದ ಮೃತದೇಹದ ಕಾಲುಗಳು ನೇರವಾಗಿರುತ್ತವೆ. ಆದ್ರೆ ಶವ ಆಸ್ಪತ್ರೆಗೆ ತಂದಾಗ ಕಾಲುಗಳು ಮಡಿಚಿದ ರೀತಿಯಲ್ಲಿತ್ತು. ಆಸ್ಪತ್ರೆಗೆ ಬಂದಿದ್ದ ರಿಯಾ ಚಕ್ರವರ್ತಿ ಶವ ನೋಡಲು ಅನುಮತಿ ಕೇಳುತ್ತಿದ್ದರು. ರಿಯಾ ಜೊತೆಗೆ ಬಂದಿದ್ದ ಓರ್ವ ಶವ ನೋಡಬೇಕೆಂದು ಕೇಳಿಕೊಂಡರು. ಆಗ ಸುಶಾಂತ್ ಗೆಳೆಯ ಎಂದು ಹೇಳಿಕೊಂಡಿದ್ದ ವ್ಯಕ್ತಿಯ ಬಳಿ ಕೇಳಿ ಎಂದೆ. ಕೊನೆಗೆ ಶವಾಗಾರದೊಳಗೆ ಹೋದ ರಿಯಾ ಸುಮಾರು 20 ನಿಮಿಷ ಅಲ್ಲಿಯೇ ಇದ್ರು. ಕ್ಷಮೆ ಕೇಳುತ್ತಾ ಅಳುತ್ತಿರೋದು ಕೇಳಿಸುತ್ತಿತ್ತು. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

https://twitter.com/shwetasinghkirt/status/1299556670595506176

ಆಸ್ಪತ್ರೆಯಲ್ಲಿ ಕೆಲಸ ಮಾಡೋದರಿಂದ ಆತ್ಮಹತ್ಯೆಗೆ ಅನೇಕ ಶವಗಳನ್ನು ನೋಡಿದ್ದೇನೆ. ಆತ್ಮಹತ್ಯೆ ಮಾಡಿಕೊಂಡ ದೇಹದ ಬಣ್ಣ ಬದಲಾಗಲ್ಲ. ಆದ್ರೆ ಸುಶಾಂತ್ ಶವದ ಬಣ್ಣ ಹಳದಿಗೆ ತಿರುಗಿತ್ತು. ಅಲ್ಲಿದ್ದ ದೊಡ್ಡ ವೈದ್ಯರು ಸಹ ಶವ ನೋಡಿದ ಕೂಡಲೇ ಕೊಲೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದರು. ಸುಶಾಂತ್ ಅಂಗಾಲಿನಲ್ಲಿ ಚುಚ್ಚಿದ ರೀತಿ ಎರಡ್ಮೂರು ಗುರುತುಗಳಿದ್ದವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ

ವ್ಯಕ್ತಿಯ ಸಂದರ್ಶನದ ವಿಡಿಯೋ ಹಂಚಿಕೊಂಡಿರುವ ಸುಶಾಂತ್ ಸೋದರಿ ಶ್ವೇತಾ ಸಿಂಗ್, ಓ ದೇವರೇ, ನನ್ನ ಸೋದರನ ಜೊತೆ ಏನೆಲ್ಲ ನಡೆದಿದೆ. ಈ ವ್ಯಕ್ತಿಯ ಮಾತುಗಳನ್ನು ಕೇಳಿ ನನ್ನ ಹೃದಯ ಒಡೆದು ಹೋಯ್ತು. ದಯವಿಟ್ಟು ಅಪರಾಧಿಗಳನ್ನು ಬಂಧಿಸಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

Comments

Leave a Reply

Your email address will not be published. Required fields are marked *