ಸುಶಾಂತ್ ಆತ್ಮಹತ್ಯೆ ಬಳಿಕ ಕರಣ್ ಜೋಹರ್, ಆಲಿಯಾ ಹೆಸ್ರು ಟ್ರೆಂಡ್ ಆಗ್ತಿರೋದ್ಯಾಕೆ?

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ನಿರ್ದೇಶಕ ಕರಣ್ ಜೋಹರ್ ಮತ್ತು ನಟಿ ಆಲಿಯಾ ಭಟ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ಒಂದು ರೀತಿ ಸುಶಾಂತ್ ಅಭಿಮಾನಿಗಳು ಕರಣ್ ಮತ್ತು ಆಲಿಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಕುಟುಂಬಕ್ಕೆ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ. ಹಾಗಾಗಿ ಆರಂಭದ ದಿನಗಳಲ್ಲಿ ಸ್ಟಾರ್ ನಟರ ಹಿಂದೆ ಡ್ಯಾನ್ಸರ್ ಆಗಿದ್ದ ಸುಶಾಂತ್ ತಮ್ಮ ಪರಿಶ್ರಮ ಪರಿಣಾಮ ಸ್ಟಾರ್ ಪಟ್ಟಕ್ಕೇರಿದ ನಾಯಕ ನಟ. ಬಾಲಿವುಡ್ ನಲ್ಲಿ ಆಗಾಗ್ಗೆ ನೆಪ್ಟೋಯಿಸಂ ಪದ ಕೇಳಿ ಬರುತ್ತಲೇ ಇರುತ್ತೆ. ಇಲ್ಲಿ ಕೇವಲ ಸ್ಟಾರ್ ಕುಡಿಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತೆ. ಪ್ರತಿಭೆಗಳನ್ನು ತುಳಿಯುವ ಪ್ರಯತ್ನ ನಡೆಯುತ್ತೆ ಎಂದು ಹಲವು ಕಲಾವಿದರು ತಮ್ಮ ಅಸಮಾಧಾನ ಹೊರ ಹಾಕಿರುವ ಉದಾಹರಣೆಗಳಿವೆ.

ಕರಣ್ ಟ್ವೀಟ್: ಸುಶಾಂತ್ ಸಾವಿಗೆ ಸಂತಾಪ ಸೂಚಿಸಿ ಕರಣ್ ಜೋಹರ್ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕೆಲ ಸಾಲುಗಳು ಚರ್ಚೆಗೆ ಗ್ರಾಸವಾಗಿವೆ. ನಿಮ್ಮೊಂದಿಗೆ ದೂರವಿದಿದ್ದು ನನ್ನ ತಪ್ಪು. ನಿಮಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಗೆಳೆಯನ ಅವಶ್ಯಕತೆ ಇತ್ತು. ಆದ್ರೆ ಇದನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ. ಮುಂದೆ ಈ ರೀತಿಯ ತಪ್ಪು ಮರುಕಳಿಸದಂತೆ ಎಚ್ಚರವಾಗಿರುತ್ತೇನೆ. ವೈಭವೋಪೇತ ಜೀವನಕ್ಕೆ ಒಗ್ಗಿಕೊಂಡಿದ್ದೇವೆ. ಈ ಅದ್ಧೂರಿ, ಆಡಂಬರದಲ್ಲಿ ಕೆಲವರು ಕಳೆದು ಹೋಗುತ್ತಾರೆ. ಕೇವಲ ಸಂಬಂಧಗಳನ್ನು ಬೆಳಸಿಕೊಂಡರೆ ಸಾಲದು, ಅವುಗಳನ್ನು ಕಾಪಾಡಿಕೊಳ್ಳುವುದು ಸಹ ಅತ್ಯಗತ್ಯ. ನಿಮ್ಮ ಸಿಹಿಯಾದ ನಗು ಮತ್ತು ಅಪ್ಪುಗೆ ಸದಾ ನೆನಪಿನಲ್ಲಿರುತ್ತದೆ ಎಂದು ಕರಣ್ ಜೋಹರ್ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

https://www.instagram.com/p/CBacnPSJRtT/

ಆಲಿಯಾ ಭಟ್ ಟ್ವೀಟ್: ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿರುವ ಆಲಿಯಾ ಭಟ್, ವಿಷಯ ಕೇಳಿ ಶಾಕ್ ಆಯ್ತು. ಸುಶಾಂತ್ ಸಾವು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ನಮ್ಮನ್ನೆಲ್ಲ ಬಿಟ್ಟು ಹೋದ್ರಿ. ನಾವು ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಕುಟುಂಬ ಮತ್ತು ಮಿತ್ರರ ದುಃಖದಲ್ಲಿ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಆಕ್ರೋಶ ಯಾಕೆ?: ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋನಲ್ಲಿ ಸುಶಾಂತ್ ಅವರನ್ನ ತುಂಬಾ ಉದ್ದೇಶಪೂರ್ವಕವಾಗಿ ಕೆಳಮಟ್ಟದಲ್ಲಿ ತೋರಿಸಲಾಗುತ್ತಿತ್ತು ಅನ್ನೋದು ಅಭಿಮಾನಿಗಳ ಆರೋಪ. ಶೋನ ರ‍್ಯಾಪಿಡ್ ಫೈರ್ ಸುತ್ತಿನಲ್ಲಿ ಸೆಲೆಬ್ರಿಟಿಗಳು ಟಾಪ್ ನಟರ ಪಟ್ಟಿಯಲ್ಲಿ ಸುಶಾಂತ್ ಹೆಸರು ಕೊನೆಯಲ್ಲಿರುತ್ತಿತ್ತು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದರು.

ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಲಿಯಾ ಭಟ್, ನಟನೆಯಲ್ಲಿ ಈ ಮೂವರನ್ನು ಕ್ರಮಾಂಕದಲ್ಲಿ ಹೇಳಿ ಎಂದು ಸುಶಾಂತ್, ರಣ್‍ವೀರ್ ಸಿಂಗ್ ಮತ್ತು ವರುಣ್ ಧವನ್ ಹೆಸರನ್ನು ಪ್ರಶ್ನೆ ಕೇಳಲಾಗುತ್ತು. ಈ ಸುಶಾಂತ್ ಸಿಂಗ್ ರಜಪೂರ್ ಯಾರು ಎಂದು ಆಲಿಯಾ ಪ್ರಶ್ನೆ ಮಾಡಿದ್ದರು. ಇದೀಗ ಇಬ್ಬರ ಸಂತಾಪಕ್ಕೆ ಅಭಿಮಾನಿಗಳು ತೋರಿಕೆಗಾಗಿ ಟ್ವೀಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಹಳೆಯ ಹೇಳಿಕೆ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *