‘ಸುದೀಪ್ ಸರ್ ನೀವು ನನ್ನ ಬದುಕಿಸಿದ್ದೀರಿ’ – ಕಿಚ್ಚನಿಗೆ ಜಯಶ್ರೀ ಧನ್ಯವಾದ

ಬೆಂಗಳೂರು: ಇತ್ತೀಚೆಗೆ ‘ಬಿಗ್‍ಬಾಸ್ ಸೀಸನ್ 3’ ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ನಟಿ ಜಯಶ್ರೀ ಫೇಸ್‍ಬುಕ್‍ನಲ್ಲಿ ಬರೆದುಕೊಳ್ಳುವ ಮೂಲಕ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ನಿಮ್ಮ ಕಾಳಜಿಗೆ ಧನ್ಯವಾದಗಳು ಸುದೀಪ್ ಸರ್. ನೀವು ನನ್ನನ್ನು ಬದುಕಿಸಿದ್ದೀರಿ. ಸುದೀಪ್ ಅವರ ತಂಡದ ಸದಸ್ಯರು, ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾನು ತುಂಬಾ ಪ್ರೀತಿಸುತ್ತೇನೆ. ನಿಮ್ಮನ್ನೆಲ್ಲ ಆತಂಕಗೊಳ್ಳುವಂತೆ ಮಾಡಿದ್ದಕ್ಕೆ ಕ್ಷಮಿಸಿ. ನಾನು ಮತ್ತೆ ಸಹಜ ಸ್ಥಿತಿಗೆ ಬಂದಿದ್ದೇನೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಜಯಶ್ರೀ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಕೆಲವು ನಿಮಿಷ ಲೈವ್ ಬಂದಿದ್ದ ಜಯಶ್ರೀ, “ಎಲ್ಲರಿಗೂ ಹಾಯ್, ನಾನು ಇದನ್ನು ಪಬ್ಲಿಸಿಟಿಗೋಸ್ಕರ ಮಾಡುತ್ತಿಲ್ಲ. ನನಗೆ ಸುದೀಪ್ ಸರ್ ಅವರಿಂದ ಒಂದು ರೂಪಾಯಿಯಷ್ಟು ಆರ್ಥಿಕ ಸಹಾಯದ ನಿರೀಕ್ಷೆ ಇಲ್ಲ. ನನಗೆ ಬೇಕಾಗಿರುವುದು ಒಂದೇ ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ, ಕುಟುಂಬದ ಸಮಸ್ಯೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಆರ್ಥಿಕವಾಗಿ ಚೆನ್ನಾಗಿಯೇ ಇದ್ದೇನೆ. ಆದರೆ ನನಗೆಲ್ಲ ಎಲ್ಲವೂ ಮೋಸ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಆಗಬಾರದ ಘಟನೆ ನಡೆದಿವೆ. ಅದನ್ನು ಮರೆಯಲು ಆಗುತ್ತಿಲ್ಲ” ಎಂದು ತಮ್ಮ ಅಳಲನ್ನು ಹೇಳಿಕೊಡಿದ್ದರು.

ಅಲ್ಲದೇ “ಫೇಸ್‍ಬುಕ್‍ನಲ್ಲಿ ನನಗೆ ಬಂದಿರುವ ಕಮೆಂಟ್ಸ್ ನೋಡುತ್ತಿದ್ದೇನೆ. ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಮಾತನಾಡಲು ಇಷ್ಗಪಡುವುದಿಲ್ಲ. ನಾನೊಬ್ಬಳು ಲೂಸರ್, ನಾನು ಹುಚ್ಚಿ, ನಾನು ಸಾಯಬೇಕು ಎಂದುಕೊಂಡಿದ್ದೇನೆ. ನಾನು ಬಯಸುತ್ತಿರುವುದು ಒಂದೇ ನನ್ನ ಸಾವು. ಹೀಗಾಗಿ ನನಗೆ ದಯಾಮರಣ ನೀಡಿದರೆ ಸಾಕು. ನಾನು ಆರಾಮಾಗಿ ಇರುತ್ತೇನೆ. ನನಗೆ ದಯಾಮರಣ ನೀಡಿ. ನಾನು ಒಳ್ಳೆಯ ಹುಡುಗಿ ಅಲ್ಲ. ಪ್ಲೀಸ್ ಪ್ಲೀಸ್ ಎಂದು ಅವರು ಕಣ್ಣೀರಿಟ್ಟಿದ್ದರು. ನಂತರ ಈ ವಿಡಿಯೋವನ್ನು ಜಯಶ್ರೀ ಡಿಲೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಫೇಸ್‍ಬುಕ್‍ನಲ್ಲಿ ‘ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಸ್ವಲ್ಪ ಸಮಯದ ನಂತರ ಆ ಪೋಸ್ಟನ್ನು ರಿಲೀಟ್ ಮಾಡಿ, “ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ’ ಎಂದು ಮತ್ತೆ ಪೋಸ್ಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *