ಮೈಸೂರು: ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೊರೊನಾ 2ನೇ ಅಲೆಗೆ ಬಹಳಷ್ಟು ಜೀವಗಳು ಬಲಿಯಾಗಿವೆ . ಬಹಳಷ್ಟು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಕೊರೊನಾಗೆ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಕರುಣಾಜನಕ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂಕಷ್ಟ ಪರಿಸ್ಥಿತಿಯನ್ನು ಅರಿತ ಸುತ್ತೂರು ಮಠ, ಅಂತಹ ಮಕ್ಕಳಿಗೆ ಜೀವನ ಪರ್ಯ0ತ ಉಚಿತ ಶಿಕ್ಷಣವನ್ನು ನೀಡುವಂತಹ ದೂರದೃಷ್ಟಿಯ ಚಿಂತನೆಯನ್ನು ಮಾಡುವದರೊಂದಿಗೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಜೇಬು ತುಂಬಿದ್ರೆ ಸಾಕೆ?, ಬಡವರ ಸ್ಥಿತಿ ಏನಾಗ್ಬೇಕು?: ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಪ್ರಶ್ನೆ

ಆರೋಗ್ಯ, ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ಹೆಸರಾದ ಸುತ್ತೂರು ಮಠ ಹಳೆ ಮೈಸೂರು ಭಾಗದ ಆಶಾಕಿರಣ ಎಂದು ಬಣ್ಣಿಸಿದ ಸಚಿವರು ಶ್ರೀ ಮಠವು ತನ್ನ ಅಧೀನದ ಸಮುದಾಯ ಭವನಗಳು, ಹಾಸ್ಟಲ್‍ಗಳು, ಕಲ್ಯಾಣಮಂಟಪ ಮುಂತಾದವುಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಪರಿವರ್ತಿಸಲು ಮುಂದಾಗಿರುವುದು ಶ್ರೀಗಳ ಮಾತೃಹೃದಯದ ಕಳಕಳಿಯನ್ನು ತೋರುತ್ತದೆ ಎಂದು ನುಡಿದರು.

Leave a Reply