ಸಿನಿಮಾ ನಂಬಿ ತಂದೆ-ತಾಯಿ ಕನಸು, ಜೀವನ ಹಾಳು ಮಾಡಿಕೊಳ್ಳದಿರಿ: ಜಗ್ಗೇಶ್

ಬೆಂಗಳೂರು: ಸಿನಿಮಾ ನಂಬಿ ತಂದೆ-ತಾಯಿ ಕನಸು ಮತ್ತು ನಿಮ್ಮ ಸುಂದರ ಜೀವನವನ್ನ ಹಾಳು ಮಾಡಿಕೊಳ್ಳಬೇಡಿ ಎಂದು ನವರಸ ನಾಯಕ, ಹಿರಿಯ ನಟ ಜಗ್ಗೇಶ್ ಅಭಿಮಾನಿಯೊಬ್ಬರಿಗೆ ಸಲಹೆ ನೀಡಿದ್ದಾರೆ. ಸಲಹೆ ಮೂಲಕ ಇಂದಿನ ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಳ್ಳುವುದು ಕಷ್ಟ ಎಂಬುದನ್ನ ಸರಳವಾಗಿ ತಿಳಿಸಿದ್ದಾರೆ.

ಅಭಿಮಾನಿಯೋರ್ವ ಜಗ್ಗೇಶ್ ಅವರಿಗೆ ಟ್ವೀಟ್ ಮೂಲಕ ಸಲಹೆ ಕೇಳಿದ್ದರು. ನಿರ್ದೇಶಕ ಆಗಬೇಕು ಎನ್ನುವುದು ನನ್ನ ಕನಸು. ಎರಡನೇ ವರ್ಷದ ಡಿಪ್ಲೋಮಾ ಮಾಡುತ್ತಿದ್ದೇನೆ. ಮುಂದೆ ಇಂಜಿನೀಯರಿಂಗ್ ಮಾಡೋದಾ ಅಥವಾ ಸಿನಿಮಾ ಉದ್ಯಮಕ್ಕೆ ಬರೋದಾ ಎಂದು ಪ್ರಶ್ನೆ ಕೇಳಿದ್ದರು. ಅಭಿಮಾನಿಯ ಪ್ರಶ್ನೆಗೆ ಸರಳವಾಗಿ ಇಂದಿನ ಸಿನಿ ಅಂಗಳದ ಕಷ್ಟಕರ ಜೀವನವನ್ನ ತಿಳಿಸುವ ಮೂಲಕ ಉತ್ತರಿಸಿದ್ದಾರೆ. ಇದನ್ನೂ ಓದಿ: ಕಪ್ಪಾಗಿ ಹುಟ್ಟಿದ್ದು ಕರ್ಮನಾ?- ದುನಿಯಾ ವಿಜಿ ಪ್ರಶ್ನೆಗೆ ಜಗ್ಗೇಶ್ ಉತ್ತರ

ದಯಮಾಡಿ ಓದಿ ದಡ ಸೇರಿ. ಇಂದಿನ ಸಿನಿಮಾ ನಂಬಿ ತಂದೆ-ತಾಯಿ ಕನಸು ಮತ್ತು ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ. ನೀವೆಲ್ಲಾ ಅಂದುಕೊಂಡಷ್ಟು ಸುಲಭವಿಲ್ಲಾ ಇಂದಿನ ಸಿನಿಮಾ. ಬೇಕಾದರೆ ಸಂತೋಷಕ್ಕೆ ಹವ್ಯಾಸವಾಗಿ ಬಳಸಿ ವೃತ್ತಿಯಾಗಿ ಅಲ್ಲ. ಬೆರಳೆಣಿಸುವ ಕೆಲವರ ಬಿಟ್ಟು ಶೇ.98ರಷ್ಟು ಸಿನಿಮಾ ಜನ ಸಂಕಷ್ಟದಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: I miss u ಅಪ್ಪಾ..- ತಂದೆಯ ಕೊನೆಯ ವಿಡಿಯೋ ಹಂಚಿಕೊಂಡ ಜಗ್ಗೇಶ್

ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ನಿಂದಾಗಿ ಚಿತ್ರರಂಗ ಸಂಕಷ್ಟದಲ್ಲಿದೆ. ಸುಮಾರು ಎರಡರಿಂದ ಮೂರು ತಿಂಗಳು ಬಣ್ಣದ ಲೋಕ ಸ್ತಬ್ಧವಾಗಿತ್ತು. ಈ ಹಿನ್ನೆಲೆ ಸಿನಿಮಾ ನಿರ್ಮಾಪಕರು, ಚಿತ್ರಮಂದಿರ ಮಾಲೀಕರು, ನಟರು ಸೇರಿದಂತೆ ಬಹುತೇಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂದಿನಿಂದ ಚಿತ್ರಮಂದಿರಿಗಳು ಆರಂಭಗೊಳ್ಳುತ್ತಿವೆ. ಇತ್ತೀಚೆಗೆ ಖ್ಯಾತ ಸಂಗೀತ ಸಂಯೋಜಕ, ಗಾಯಕ ರಘು ದೀಕ್ಷಿತ್ ಸಹ ಆರ್ಥಿಕ ಸಂಕಷ್ಟದಲ್ಲಿರುವ ಬಗ್ಗೆ ಹೇಳಿದ್ದರು. ಇದನ್ನೂ ಓದಿ: ಅಮ್ಮ ನನ್ನ ಬಿಟ್ಟು ಹೋಗಿ ಇಂದಿಗೆ 26 ವರ್ಷ: ಜಗ್ಗೇಶ್

Comments

Leave a Reply

Your email address will not be published. Required fields are marked *