ಸಿನಿಮಾದಲಷ್ಟೆ ನಟಿ, ನಿಮ್ಮಂತೆ ನಾನೂ ಮನುಷ್ಯಳೇ: ಸಿಂಧು ಲೋಕನಾಥ್

ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಅನೇಕ ನಟ-ನಟಿಯರು ಮಾನಸಿಕ ಖಿನ್ನತೆಯ  ಬಗ್ಗೆ ತಮ್ಮ ಅಭಿಪ್ರಾಯ, ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸ್ಯಾಂಡಲ್‍ವುಡ್ ನಟಿ ಸಿಂಧು ಲೋಕ್‍ನಾಥ್ ತಮ್ಮ ಬಗ್ಗೆ ಮಾತನಾಡಿದ್ದಾರೆ.

ನಟಿ ಸಿಂಧು ಲೋಕನಾಥ್ ಇನ್‍ಸ್ಟಾಗ್ರಾಂನಲ್ಲಿ “ನಾನು ಸಿನಿಮಾದಲ್ಲಿ ಮಾತ್ರ ನಟಿ, ನಿಮ್ಮಂತೆ ನಾನು ಕೂಡ ಮನುಷ್ಯಳು’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಸಿಂಧು ಲೋಕನಾಥ್ ಇದ್ದಕ್ಕಿದ್ದಂತೆ ಏಕೆ ಹೀಗೆ ಪೋಸ್ಟ್ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ.

ಪೋಸ್ಟ್‌ನಲ್ಲಿ ಏನಿದೆ?
“ನಾನೊಬ್ಬ ನಟಿ, ಅಂದರೆ ನಾನು ತೆರೆಯ ಮೇಲಷ್ಟೆ ನಟಿ. ತೆರೆಯ ಹಿಂದೆ ಅಲ್ಲ. ನಾನು ಜೀವನದಲ್ಲಿ ಮಾಡುವುದೆಲ್ಲವೂ ನಟನೆ ಅಲ್ಲ. ನಾನೂ ಸಹ ಎಲ್ಲರಂತೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಭಾವನೆಗಳನ್ನು ಸುಳ್ಳು, ನಕಲಿ ಮಾಡಲಾಗುವುದಿಲ್ಲ. ನಾನು ಭಯಪಡುತ್ತೇನೆ. ನಾನು ಕಷ್ಟಪಡುತ್ತೇನೆ, ನನಗೂ ನೋವಾಗುತ್ತದೆ, ಅಳುತ್ತೇನೆ, ನಾನು ಕೂಡ ಸಂತೋಷ ಮತ್ತು ನೋವನ್ನು ಸಮಾನವಾಗಿ ಅನುಭವಿಸುತ್ತೇನೆ” ಎಂದಿದ್ದಾರೆ.

“ನಾನು ಸಿನಿಮಾ ನಟಿ ಆಗಿರುವುದರಿಂದ ಸಾಮಾನ್ಯ ಮನುಷ್ಯಳಲ್ಲವೆಂದು ನಿಮಗೆ ಕಾಣಿಸಬಹುದು. ಆದರೆ ಆಳದಲ್ಲಿ ನಾನು ಸಾಮಾನ್ಯಳು. ಎಲ್ಲಕ್ಕಿಂತ ಮುಖ್ಯವಾಗಿ  ನಿಮ್ಮಂತೆ ನಾನೂ ಸಹ ಒಬ್ಬ ಸಾಮಾನ್ಯ ಮನುಷ್ಯಳು” ಎಂದು ಸಿಂಧು ಲೋಕನಾಥ್ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಸಿಂಧು 2009ರಲ್ಲಿ ಬಿಡುಗಡೆಗೊಂಡ ‘ಪರಿಚಯ’ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಂತರ 2012ರಲ್ಲಿ ತೆರೆಕಂಡ ‘ಲೈಫ್ ಇಷ್ಟೇನೆ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಸಿಂಧು ಲೋಕ್‍ನಾಥ್ ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

https://www.instagram.com/p/CBfB7pvHAHk/?igshid=18c29hisu1425

Comments

Leave a Reply

Your email address will not be published. Required fields are marked *