ಸಿಡಿ ಯುವತಿ ವಿಚಾರದಲ್ಲಿ ಮುಂದುವರಿದ ಕೆಸರೆರಚಾಟ- ಡಿಕೆಶಿಗೆ ಎಚ್ಚರಿಕೆ

– ಇತ್ತ ಕಾಂಗ್ರೆಸ್, ಬಿಜೆಪಿ ಟ್ವೀಟ್ ಸಮರ

ಬೆಂಗಳೂರು: ಸಿಡಿ ಯುವತಿಯ ವಿಚಾರದಲ್ಲಿ ಕೆಸರೆರಾಚಾಟ ಮುಂದುವರೆದಿದೆ. ಇಷ್ಟಕ್ಕೆಲ್ಲಾ ಡಿಕೆಶಿ ಕಾರಣವಾಗಿದ್ದು, ಸದ್ಯದಲ್ಲೇ ಇನ್ನಷ್ಟು ಆಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಅಂತ ಯುವತಿ ಸಹೋದರ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಅಕ್ಕನನ್ನು ಈಗಲೂ ಡಿಕೆಶಿಯೇ ಹಿಡಿದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲೆ ಮತ್ತೆ ಆರೋಪ ಮಾಡ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನಗೂ ಇದಕ್ಕೂ ಸಂಬಂಧವಿಲ್ಲ. ಕೆಲವರಿಗೆ ನನ್ನ ಹೆಸರು ಹೇಳದಿದ್ರೆ ಮಾರ್ಕೆಟ್ ಇಲ್ಲ.. ಅದಕ್ಕೆ ಮಾತಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ ಇದು ಕಾಂಗ್ರೆಸ್ ಷಡ್ಯಂತ್ರವಾಗಿದ್ದು, ಇದ್ರಲ್ಲಿ ಡಿಕೆಶಿ ಪಾತ್ರ ಇದೆ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪಿಸಿದ್ದಾರೆ. ರಮೇಶ್ ಜಾರಕಿಹೊಳಿ ಬಂಧನ ಆಗದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಎಂದಿನಂತೆ ಟ್ವೀಟ್ ವಾರ್ ಮುಂದುವರೆದಿದೆ. ರೇಪಿಸ್ಟ್ ಜನತಾ ಪಾರ್ಟಿಯ ಹೊಸ ನೀತಿಯ ಪ್ರಕಾರ ಸಂತ್ರಸ್ತೆಯ ಸಹಾಯಕ್ಕೆ ನಿಲ್ಲುವವರು ತಪ್ಪಿತಸ್ಥರು. ಆರೋಪಿಯ ರಕ್ಷಣೆಗೆ ನಿಲ್ಲುವ ಬಿಜೆಪಿಗರು ಸುಭಗರು.. ರೇಪಿಸ್ಟ್ ರಮೇಶ್ ಎಲ್ಲಿದ್ದಿಯಪ್ಪಾ…? ಎಂದು ಹ್ಯಾಷ್ ಟ್ಯಾಗ್ ಬಳಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಈ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿ, ದಲಿತ ಶಾಸಕ ಅಖಂಡ ಅವರು ಎಷ್ಟು ನೆರವು ಬೇಡಿದರೂ ಕಾಂಗ್ರೆಸ್ ಪಕ್ಷ ಅವರ ನೆರವಿಗೆ ಧಾವಿಸಲಿಲ್ಲ. ಸಿಡಿ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಬಳಸಿಕೊಳ್ತಿದೆ. ಹಣಕಾಸಿನ ನೆರವು, ಕಾನೂನು ಸಲಹೆ, ವಾಹನ ವ್ಯವಸ್ಥೆ ಎಲ್ಲವೂ ಕೆಪಿಸಿಸಿ ಕಚೇರಿಯಿಂದಲೇ ಆಗ್ತಿದೆ. ಇದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿ ಡಿಕೆಶಿಮಸ್ಟ್ ರಿಸೈನ್ ಎಂದು ಹ್ಯಾಷ್ ಟ್ಯಾಗ್ ಬಳಸಿದೆ.

ಇನ್ನೊಂದು ಟ್ವೀಟ್ ಮಾಡಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ, ಸಂತ್ರಸ್ತೆ ನೇರವಾಗಿ ನಿಮ್ಮ ಹೇಳಿದ್ದಾರೆ. ಸಂತ್ರಸ್ತೆಯ ಪೋಷಕರೂ ನಿಮ್ಮ ಮೇಲೆ ಬೊಟ್ಟು ಮಾಡಿದ್ದಾರೆ. ಈಗ ನಿಮ್ಮದೇ ಪಕ್ಷದ ಲಖನ್ ನಿಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ನೀವು ಮಾಡಿರುವ ಷಡ್ಯಂತ್ರ್ಯಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.

Comments

Leave a Reply

Your email address will not be published. Required fields are marked *