ಸಿಡಿ ಗ್ಯಾಂಗ್‌ – ವಿಚಾರಣೆಗೆ ಒಳಪಟ್ಟವರು ಯಾರು? ಆರೋಪ ಏನು?

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಜಿ ಪತ್ರಕರ್ತರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ವಿಚಾರಣೆ ನಡೆಸಿದೆ.

ಸೌಮೆಂದು ಮುಖರ್ಜಿ ನೇತೃತ್ವದ ಎಸ್‌ಐಟಿಯಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ಅಪರಾಧ ವಿಭಾಗದ ಡಿಸಿಪಿ ರವಿ ಕುಮಾರ್ ಇದ್ದಾರೆ. ಸಿಸಿಬಿ ಎಸಿಪಿ ಧರ್ಮೇಂದ್ರ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಇವರ ಜೊತೆಗೆ ಸಿಸಿಬಿ ಇನ್‌ಸ್ಪೆಕ್ಟರ್‌ ಪ್ರಶಾಂತ್ ಬಾಬು, ಕಬ್ಬನ್‌ಪಾರ್ಕ್ ಇನ್‌ಸ್ಪೆಕ್ಟರ್‌ ಮಾರುತಿ ಸಹ ವಿಶೇಷ ತನಿಖಾ ತಂಡದಲ್ಲಿದ್ದಾರೆ.

ಕೆಲ ತಿಂಗಳ ಹಿಂದೆ ನರೇಶ್‌ ಗೌಡ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಿಡಿ ಗ್ಯಾಂಗ್‌ ಸದಸ್ಯರು ಭಾಗಿಯಾಗಿದ್ದರು.  ಇರುವ ಫೋಟೋಗಳು ಲಭ್ಯವಾಗಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಗ್ಯಾಂಗ್‌ ಸದಸ್ಯರ ಪೈಕಿ ನರೇಶ್‌ ಮತ್ತು ಶ್ರವಣ್‌ ನಾಪತ್ತೆಯಾಗಿದ್ದು, ಅವರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗುತ್ತಿದ್ದಾರೆ.

ವಿಚಾರಣೆಗೆ ಒಳಪಟ್ಟವರು ಯಾರು? ಆರೋಪ ಏನು?
ನರೇಶ್‍ಗೌಡ:
ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ. ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ.

ಶ್ರವಣ್:
ವಿಜಯಪುರ ದೇವನಹಳ್ಳಿಯ ಮೂಲ ಶ್ರವಣ್‌ ಹ್ಯಾಕಿಂಗ್‌ ತಜ್ಞನಾಗಿದ್ದು, ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ.

ಭವಿತ್ ದೋಣಗುಡಿಗೆ:
ಚಿಕ್ಕಮಗಳೂರಿನ ಆಲ್ದೂರಿನ ಮಾಜಿ ಪತ್ರಕರ್ತ. ರಾಸಲೀಲೆ ಸಿಡಿಗೆ ಸ್ಕ್ರಿಪ್ಟ್, ವಾಯ್ಸ್ ಆರೋಪ.

ಆಕಾಶ್ ತಳವಾಡೆ:
ಬೀದರ್ ಭಾಲ್ಕಿ ಮೂಲದ ಆಕಾಶ್‌ ತಳವಾಡೆ ಹವ್ಯಾಸಿ ಸಾಕ್ಷ್ಯಚಿತ್ರ ತಯಾರಕನಾಗಿದ್ದು, ಸಿಡಿ ಲೇಡಿ ಸ್ನೇಹಿತನಾಗಿದ್ದಾನೆ.

ಸಾಗರ್ ಶಿಂಧೆ:
ಬೀದರ್ ಔರಾದ್ ಮೂಲದ ಸಾಗರ್‌ ಶಿಂಧೆ ಸೈಬರ್ ಕೆಫೆ ಉದ್ಯೋಗಿ. ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ.

ಸಿಲೋಟ್:
ರಾಮನಗರ ಮೂಲದ ಶಾಲಾ ಶಿಕ್ಷಕಿ. ಲಕ್ಷ್ಮಿಪತಿ ಸ್ನೇಹಿತೆಯಾಗಿದ್ದು ಕಲ್ಲಹಳ್ಳಿಗೆ ಸಿಡಿ ತಲುಪಿಸಿದ ಆರೋಪವಿದೆ.

Comments

Leave a Reply

Your email address will not be published. Required fields are marked *